ಹೀಗೊಂದಿಷ್ಟು ಪ್ರಮಾಣವಚನಗಳು .

ಹೀಗೊಂದಿಷ್ಟು ಪ್ರಮಾಣವಚನಗಳು .

ಬರಹ

ಈಗಾಗಲೇ ಯಾರು ಸರ್ಕಾರ ರಚಿಸಬಹುದು ಎಂಬುದರ ಸ್ಪಷ್ಟ ಅಲ್ಲದಿದ್ದರೂ ,ಚಿತ್ರಣ ದೊರಕಿದೆ ನಮಗೆ .ಸರ್ಕಾರ ಎಂದ ಮೇಲೆ ಮಂತ್ರಿ ಮಂಡಲ ಇರಲೇಬೇಕು .ಮಂತ್ರಿಮಂಡಲ ರಚಿಸಬೇಕಾದರೆ ಮಂತ್ರಿಗಳೆಲ್ಲರೂ ಪ್ರಮಾಣ ವಚನ ಸ್ವೀಕರಿಸಲೇಬೇಕು. ಆ ಪ್ರಮಾಣವಚನಗಳು ಹೇಗಿರಬಹುದೆಂದು ನನ್ನ ಕಲ್ಪನೆಯಲ್ಲಿ ಬರೆದಿದ್ದೇನೆ ,ಸ್ವಲ್ಪ ತಿಳಿ ಹಾಸ್ಯ ಬೆರೆಸಿ .
ಇವನೇನು ಈ ರೀತಿ ಕೊಯ್ದಿದ್ದಾನಲ್ಲ ಅನ್ನಿಸಿದರೆ ತತ್ ಅಂತ ಸುಮ್ಮನಾಗಿ .ಚೆನ್ನಾಗಿದೆ ಅನ್ನಿಸಿದರೆ ಮನತುಂಬ ನಕ್ಕುಬಿಡಿ ಒಮ್ಮೆ :

ಮೊದಲನೆಯದಾಗಿ ಪ್ರಧಾನಿ .
ಮೇಡಂ ಸಿಂಗ್ : ಡ್ಯಾಶ್ ಎಂಬುವವರ ಪುತ್ರನಾದ ನಾನು ಡ್ಯಾಶ್ ಎಂಬಲ್ಲಿ ಜನಿಸಿ ಡ್ಯಾಶ್ ದಿಂದ ರಾಜಕಾರಣಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ . ಮೇಡಂಮ್ಮೆ ನನಗೆ ಸರ್ವವೂ ಹಾಗಾಗಿ ಅವರ ಆ ಪವಿತ್ರ ಸೀರೆಯ ಮೇಲೆ 'ಕೈ ' ಇಟ್ಟು ಪ್ರಮಾಣವಚನ ಸ್ವೀಕರಿಸುತ್ತೇನೆ .ಕಳೆದ ಬಾರಿಯನ್ತೆಯೇ ಈ ಬಾರಿಯೂ ನಿಮ್ಮೆಲ್ಲರನ್ನು ಈ ಸೆರೆಯಲ್ಲಿ ಬಂಧಿಸಿ ,ದೇಶವನ್ನು ಆ(ಧೋ)ಗತಿಯತ್ತ ಕೊಂಡೈಯುತ್ತೇನೆ ಹಾಗೂ ದೇಶದ ಹಿತದೃಷ್ಟಿಯಿಂದ ಯಾವೊಬ್ಬ ಉಗ್ರಗಾಮಿಯನ್ನು ಬಂಧಿಸುವುದಿಲ್ಲ ,ಬಂಧಿಸಿದರು ನೇಣು ಗಂಬಕ್ಕೆ ಏರಿಸುವುದಿಲ್ಲ ಎಂಬ ಆಶ್ವಾಸನೆಯನ್ನು ಬಹಿರಂಗ ಪ್ರಚಾರ ಮುಗಿದ ಮೇಲು ಬಹಿರಂಗವಾಗೇ ನೀಡುತಿದ್ದೇನೆ.ಕಳೆದ ಬಾರಿಯಂತೆ ತಾವು ಕೂಡ , ನನ್ನ ಈ ಸುಖ ಜೀವನಕ್ಕೆ ತೊಂದರೆಕೊಡದೆ ನಿಮ್ಮ ಪಾಡಿಗೆ ನೀವಿದ್ದುಬಿಡಿ ಎಂದು ಹೇಳುತ್ತಾ ಭರತ ಖಂಡದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತಿದ್ದೇನೆ.
ಕೈ ಮೇಡಂ ಒಹ್ ಒಹ್ ಕ್ಷಮಿಸಿ ಜೈ ಮೇಡಂ .
++++++++++++++++++++++++++++++++++++++++++++++++++++++++++++++++++
ಆಲೂ ಲಾಲು :
ಡ್ಯಾಶ್ ಎಂಬುವವರ ಪುತ್ರನಾದ ನಾನು ಡ್ಯಾಶ್ ಎಂಬಲ್ಲಿ ಜನಿಸಿ ಡ್ಯಾಶ್ ದಿಂದ ರಾಜಕಾರಣಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ ,ಕಳೆದ ಸಾರಿ ನಿಮಗೆ ತಿಳಿದಿರುವಂತೆ ೫ ವರ್ಷವಿಡಿ ರೈಲು ಬಿಟ್ಟು ಕೊಂಡೆ ನಿಮ್ಮೆಲ್ಲರನ್ನು ರೈಲ್ ಹತ್ತಿಸಿದ್ದೇನೆ .ಎಮ್ಮೆಯೇ ನಮ್ಮ ಮನೆಯ ಕಾಮಧೇನು ,ಹಾಗಾಗಿ ಅದು ಸಗಣಿ ಹಾಕದಿದ್ದಾಗ ಉಪಯೋಗಿಸುವ ಜಾಪಾಳ್ ಮಾತ್ರೆಯಮೇಲೆ ಕೈ ಇಟ್ಟು - ಬಿಟ್ಟು ಪ್ರಮಾಣವಚನ ಸ್ವೀಕರಿಸುತಿದ್ದೇನೆ .ಈ ಬಾರಿ ಆರೋಗ್ಯ ಮಂತ್ರಿಯಾಗಿ ಆದಷ್ಟು ನಿಮ್ಮ ಆರೋಗ್ಯವನ್ನು ಹಾಳುಮಾಡಬೇಕೆಂಬುದೇ ನನ್ನ ಉದ್ದೇಶ .ನಾನು ಅರೋಗ್ಯ ಮಂತ್ರಿಯಾದರೆ ಎಲ್ಲ ಮೆಡಿಕಲ್ ಗಳಲ್ಲೂ ಅವಧಿಮುಗಿದ ಮಾತ್ರೆ ,ಲಸಿಕೆಗಳನ್ನೇ ಪೂರೈಸುವುದಾಗಿ ಮಾತ್ರೆಯ ಮೇಲೆ ಶಪಥ ಮಾಡುತಿದ್ದೇನೆ .
ಜಬ್ ತಕ್ ಆಲೂಕ ನಾಮ್ ರಹೇಗಾ ತಬ್ ತಕ್ ಬಿಹಾರ್ ಮೇ ಲಾಲು ರಹೇಗಾ , ವಾಹ್ ವಹಃ.
ಜೈ ಲಾಲು ,ಜೈ ಹೋ ರಾಬ್ಡಿ .
:D :D

ನಿಮಗಿಷ್ಟವಾದಲ್ಲಿ ಮುಂದುವರಿಸುವ ಧೈರ್ಯ ಮಾಡುತ್ತೇನೆ .