ಹೀಗೊಂದು ಅನುಭವ
ಹೀಗೊಂದು ಅನುಭವ. ..
ಮೊನ್ನೆ ನನ್ನ ಗೆಳೆಯರೊಬ್ಬರನ್ನು ಮಾತನಾಡಿಸಿಕೊಂಡು ಬರಲು ಬೈಕಿನಲ್ಲಿ ಹೊರಟಿದ್ದೆ.ದಾರಿ ಮಧ್ಯೆ ಹೊಟ್ಟೆ ಹಸಿವಾಗಿದ್ದರಿಂದ ಕರುಳಿನ ಕೂಗಿಗೆ ಓಗೊಟ್ಟು ಹೊಟೇಲ್ ಒಂದರ ಪಕ್ಕ ಬೈಕ್ ನಿಲ್ಲಿಸಿದೆ.ಅಷ್ಟೊತ್ತಿಗೆ ವೊಲ್ವೋ ಬಸ್ಸೊಂದು ಪ್ರಯಾಣಿಕರನ್ನು ಊಟ ಮಾಡಿಸಲು ಅದೇ ಹೊಟೇಲಿನ ಮುಂದೆ ಬಂದು ನಿಂತುಕೊಂಡಿತು.ನಾನು ಕೂಡ ಪ್ರಯಾಣಿಕರ ಜೊತೆ ಹೊಟೇಲ್ ಒಳ ಹೋಗಿ ಊಟಕ್ಕೆ ಕುಳಿತೆ.ಅನ್ನ ಸಾಂಬಾರ್ ಒಂದು ಬಗೆಯ ಪಲ್ಯ ಮಜ್ಜಿಗೆ ಹಪ್ಪಳದ ಸಾದ ಊಟವದು.ಊಟದ ಬಳಿಕ ಬಿಲ್ ಪಾವತಿಸಲೆಂದು ಕೌಂಟರ್ ಬಳಿ ತೆರಳಿ ನೂರರ ನೋಟನ್ನು ಕೊಟ್ಟೆ. ಕ್ಯಾಶಿಯರ್ ಅದರಲ್ಲಿ ಇಪ್ಪತ್ತು ರೂಪಾಯಿ ವಾಪಾಸ್ ಕೊಟ್ರು.ನನಗೆ ಆಶ್ಚರ್ಯವಾಯ್ತು.. ಕೈಯನ್ನೊಮ್ಮೆ ಮೂಸಿ ನೋಡಿ ಮಾಡಿದ್ದು ಸಸ್ಯಹಾರ ಊಟವೇ ಎಂಬುದನ್ನು ಮತ್ತೊಮ್ಮೆ ಖಾತ್ರಿ ಪಡಿಸಿಕೊಂಡೆ.ಆಮೇಲೆ ಅವರಿಗೆ ನಾನು ವೊಲ್ವೋ ಬಸ್ಸಿನಲ್ಲಿ ಬಂದವ ಅಲ್ಲ ಅಂತದೆ.ಆಗ ಮತ್ತೆ ಇಪ್ಪತ್ತು ರೂಪಾಯಿ ಮರಳಿಸಿದರು.ಹೊಟೇಲುಗಳಲ್ಲಿ ಆಹಾರದ ಪರಿಮಾಣ ಮತ್ತು ಗುಣಮಟ್ಟ ನೋಡಿ ದರ ನಿಗದಿಪಡಿಸುವುದು ಕ್ರಮ.ಆದರೆ ಗ್ರಾಹಕರು ಬಂದ ವಾಹನಗಳನ್ನು ನೋಡಿ ದರ ನಿಗದಿಪಡಿಸುವುದು ಮಾತ್ರ ಅಕ್ರಮ.ಜಗತ್ತಿನಲ್ಲಿ ಈ ರೀತಿಯಲ್ಲೂ ವ್ಯಾಪಾರ ಮಾಡುವವರಿದ್ದಾರೆ.
ಎಚ್ಚರ.... ಗ್ರಾಹಕ.. ಎಚ್ಚರ..ನನ್ನ ಫೇಸ್ಬುಕ್ ಗೆಳೆಯರ ಹಿತಕ್ಕಾಗಿ ಈ ಅನುಭವ ಬರೆಯಲಾಗಿದೆ.
-@ಯೆಸ್ಕೆ