ಹೀಗೊಂದು ಆಲದ ಮರ ಮತ್ತು ಅದರ ’ವಿಚಾರವಾದಿ’ ಕೊಂಬೆಗಳು

ಹೀಗೊಂದು ಆಲದ ಮರ ಮತ್ತು ಅದರ ’ವಿಚಾರವಾದಿ’ ಕೊಂಬೆಗಳು

ಬರಹ

ಒಂದು ದೊಡ್ಡ ಆಲದಮರ. ಲಕ್ಷಾಂತರ ವರ್ಷಗಳಿಂದ ಬೆಳೆದಂತಹ ಮರ ಸುಮಾರು ಕವಲಾಗಿ ಒಡೆದ ಮರ.ಆ ಮರ ಸುಮಾರು ವ್ಯಕ್ತಿಗಳು ತಮ್ಮ ಅನುಭವ ಮೂಸೆಯಿಂದ ವಿಚಾರಗಳನ್ನು ಆಯ್ದು ಅಳವಡಿಸಿದಂತಹ ಮರ.
ಮುಂದೇ ಕವಲಾಗಿ ಒಡೆದರೂ ಮರದ ಬೇರು ಒಂದೇ ಇತ್ತು
ಮರದ ಕೊಂಬೆಗಳೆಲ್ಲಾ ಆ ಮರದ ಬೇರನ್ನೇ ತಮ್ಮ ತಾಯಿ ಬೇರು ಎಂದು ತಿಳಿದಿದ್ದವು
ಕವಲುಗಳು ನೂರಾರು ಮೈಲಿ ಬೆಳೆದವು. ಮರದ ಬೇರು ಗಟ್ಟಿಯಾಗಿಯೇ ಇತ್ತು. ಇನ್ನೂ ಗಟ್ಟಿಯಾಯಿತು
ಜೊತೆಗೆ ಕೆಲವು ಬಿಳಲುಗಳು ಬಂದವು . ಕೆಲವು ಬಿಳಲುಗಳು ನೆಲಕ್ಕೆ ತಾಗಿ ಮತ್ತೊಂದಷ್ಟು ಮರಗಳಾದವು. ಆದರೆ ಅವನ್ನೂ ಆಲದ ಮರವೆಂದೇ ಕರೆಯಲಾಯ್ತು.
ಈ ನಡುವೆ ನೂರಾರು ಮೈಲಿ ಬೆಳೆದ ಕವಲುಗಳು ಹೊರಗಿನ ಬೇರೆ ಮರಗಳನ್ನು ಕಂಡವು . ಕೆಲವು ಈಗ ತಾನೆ ಹುಟ್ಟಿದವು. ಇನ್ನೂ ಕೆಲವು ಆಲದ ಮರದಷ್ಟೇ ಹಳೆಯವು. ಆದರೆ ಆಲದ ಮರದಷ್ಟು ಗಟ್ಟಿ ಬೇರನ್ನು ಹೊಂದಿರಲಿಲ್ಲ .ಏಕೆಂದರೆ ಆ ಮರಗಳು ಕೇವಲ ಒಬ್ಬವ್ಯಕ್ತಿಯಿಂದ ಪೋಷಿಸಲ್ಪಟ್ಟವು.
ಈ ಬೇರೆ ಮರಗಳನ್ನು ಕಂಡಾ ಕವಲುಗಳಿಗೆ ಇದ್ದಕಿದ್ದಂತೆ ತಮ್ಮ ತಾಯಿ ಬೇರಿನ ಬಗ್ಗೆಯೇ ಸಂಶಯ ಹುಟ್ಟ ತೊಡಗಿದವು
ಕೆಲವಕ್ಕೆ ಆಲದ ಮರ ಎಂದರೆ ಯಾರು ತಾನು ಅದರ ಕೊಂಬೆಯಾದ ಮಾತ್ರಕ್ಕೆ ಆಲದ ಮರದ ತುಂಡು ಹೇಗೆ ಕರೆಯಬಹುದು ಎಂಬ ಸಂಶಯ
ಇನ್ನೂ ಕೆಲವು ಆಲದ ಮರ ಎಂಬುದೇ ಇರಲಿಲ್ಲ. ಅದೆಲ್ಲಾ ಸುಳ್ಳು ಎಂದು ವಾದಿಸತೊಡಗಿದವು ತಾವಿನ್ನೂ ಅದರ ಕವಲೇ ಎಂದು ಅವುಗಳು ತಿಳಿಯಲಿಲ್ಲ.
ಕೆಲವಂತೂ ಹೆಜ್ಜೆ ಮುಂದೇ ಹೋಗಿ ಈ ಆಲದ ಮರಕ್ಕೆ ರೋಗಗಳು ಹತ್ತಿವೆ ಅದನ್ನು ಕಡಿಯಬೇಕು ಎಂದು ಹಟ ಹಿಡಿದವು. ಆಲದ ಮರ ಕಡಿದರೆ ತಮಗೂ ಯಾವ ಅಸ್ತಿತ್ವ ಇರುವುದಿಲ್ಲ ಎಂದು ಅವಕ್ಕೆ ತಿಳಿಯಲಿಲ್ಲ.
ಆಲದ ಮರದಲ್ಲಿ ಆಗುತ್ತಿರುವ ಆಂತರಿಕ ಕದನ ಹೊರಗಿನ ಮರಗಳಿಗೆ ತಿಳಿದವು. ಅವಕ್ಕೊ ಇಡಿ ಪ್ರಪಂಚದಲ್ಲಿರುವ ಜಾಗವೆಲ್ಲಾ ತಮ್ಮದೇ ಆಗಬೇಕೆಂಬ ದುರಾಸೆ. ಈ ಆಲದ ಮರವನ್ನು ಕಡಿಸಿದರೆ ಬಹಳ ದೊಡ್ಡ ಜಾಗ ತಮ್ಮದಾಗುತ್ತವೆ ಎಂದು ಅವುಗಳೂ ತುಂಬಾ ದಿನದಿಂದ ಕಣ್ಣಿಟ್ಟಿದ್ದವು
ಅವಕ್ಕೆ ವರದಾನವಾಗಿ ಕಂಡದ್ದು ಸುಮ್ಮನೇ ಅರಚುತಿದ್ದ ಆಲದ ಮರದ ವಿಚಾರವಾದಿ ಕೊಂಬೆಗಳು. ಅವುಗಳ ಅರಚಾಟದ ಲಾಭ ಪಡೆದು ಆಲದ ಮರದ ಒಂದೊಂದೇ ಕವಲುಗಳನ್ನುಒಡೆದವು. ನಿಮಗೆ ನಾವು ಆಶ್ರಯ ಕೊಡುತ್ತೇವೆ. ಒಂದು ಹಗ್ಗದಿಂದ ನಮ್ಮ ಮರಕ್ಕೆ ಕಟ್ಟಿ ಸೇರಿಸಿಕೊಳ್ಳುತ್ತೇವೆ ಎಂದೆಲ್ಲಾ ಅಮಿಷ ಒಡ್ದಿದವು.
ಆದರೂ ಆ ವಿಚಾರಕವಲುಗಳು ಇದೆಲ್ಲಾ ಒಳ್ಳೆಯದಕ್ಕೇ ಆಗುತ್ತಿರುವುದು ಎಂದು ಬೊಬ್ಬೆ ಹೊಡೆದವು.
ಆದರೆ ಆ ಕೊಂಬೆಗಳು ದೂರ ಹೋಗಿದ್ದು ಆಲದ ಮರಕ್ಕೆ ಒಂದು ರೀತಿಯಲ್ಲಿ ಒಳ್ಳೆಯದಾಗುತ್ತಿತ್ತು. ದೊಡ್ದ ಸಂಖ್ಯೆಯಲ್ಲಿದ್ದ ಆ ಮರದ ಬಲಿಷ್ಟ ಕೊಂಬೆಗಳು ಬೇರೆಮರದ ಆಕ್ರಮಣವನ್ನು ತಡೆಯಲು ಶಕ್ತ್ಯವಾಯಿತು.
ಕೊನೆಗೊಮ್ಮೆ ಅರಚಾಡುತ್ತಿದ್ದ ಕೊಂಬೆಗಳೆಲ್ಲಾ ಪರಕೀಯ ಮರದ ಪಕ್ಷಕ್ಕೆ ಸೇರಿದೆವು ಎಂದು ಬೀಗುತ್ತಿದ್ದ ಆ ಕೊಂಬೆಗಳೆಲ್ಲಾ ಒಮ್ಮೆ ಹಗ್ಗ ಕಡಿದು ಕೊಂಡು ದೊಪ್ಪೆಂದು ಬಿದವು.
ಇತ್ತ ತಾಯಿ ಬೇರಿಗೂ ಹೋಗಲಾರದೆ , ಅತ್ತ ಕರೆದ ಮರವೂ ಸೇರಿಸಿಕೊಳ್ಳಲಿಲ್ಲ
ಒಂದು ಅತಂತ್ರ ಸ್ಥಿತಿಯಲ್ಲಿ ನರಳಲಾರಂಭಿಸಿದವು.
ಇತ್ತ ಆಲದ ಮರ ಮಾತ್ರ ತನ್ನ ಪಾಡಿಗೆ ತಾನು ಇನ್ನಷ್ಟು ವಿಶಾಲವಾಗಿ , ಗಟ್ಟಿಯಾಗಿ ಬೇರನ್ನು ಬಿಡುತ್ತಾ , ಮತ್ತಷ್ಟು ಕೊಂಬೆಗಳನ್ನು ಚಾಚುತ್ತಾ ಬೆಳೆಯುತ್ತಿತ್ತು.
ಈಗಲೂ ಬೆಳೆಯುತ್ತಲೇ ಇದೆ. ಎಲ್ಲಾ ಕಾಲದಲ್ಲಿ ಆದಂತೆ ಮತ್ತೆ ಬೆರಳೆಣಿಕೆಯ ವಿಚಾರವಂತಕೊಂಬೆಗಳೂ ಜನಿಸುತ್ತಲೇ ಇವೆ, ತಾಯಿ ಬೇರಿನ ಅಸ್ತಿವನ್ನು ಪ್ರಶ್ನಿಸುತ್ತಲೇ ಬೆಳೆಯುತ್ತಿವೆ.

(ಚಿತ್ರ ವಿಕಿಪಿಡಿಯಾದಿಂದ)