ಹೀಗೊಂದು ಕವನ

ಹೀಗೊಂದು ಕವನ

ಬರಹ

ಈ ಕವನವನ್ನು ನನಗೆ ಹೇಳಿದವರು ಶ್ರೀ ಶಿಬಾಡ್ ಅನ್ನುವವರು. ಅವರು ಸಹಾಯಕ ಗ್ರಂಥಪಾಲಕರಾಗಿದ್ದರು. ಇದನ್ನು ಹೇಳಿದ್ದು ೧೯೬೬ ನಲ್ಲಿ. ಆಗ ನಾನು B.Sc part 2 ದಲ್ಲಿ ಓದುತ್ತಿದ್ದೆ.ಈ ಕವನವು ದಿllದಿನಕರ ದೇಸಾಯಿ ಅವರು ಬರೆ ಯುವ ಶೈಲಿಯಲ್ಲಿದೆ. ಆಗ ಅದೇ ಒಂದು fashion/ಶೈಲಿ ಆಗಿತ್ತು.
ಈಗ ಪದ್ಯ ಓದಿರಿ :
ರಾಷ್ಟ್ರ ಭಾಶೆಯ ಸ್ಥಾನ ಹಿಂದಿಗೇ ಏಕೆ ?
ಈಗಿದ್ದ ಇಂಗ್ಲೀಶ ಹೊರದೂಡಬೇಕೆ ?
ಚರ್ಚೆಯೇ ನೆಡೆದಿತ್ತು ಇಂಗ್ಲಿಶಿನಲ್ಲಿ
ಹಿಂದಿ ಬಂದರೆ ತಾನೆ ಇದ್ದವರಿಗಲ್ಲಿ !

ಈಗಲೂ ಸ್ವಲ್ಪ ಮಟ್ಟಿಗೆ ಈ ಕವನ ಪ್ರಸ್ತುತವಾಗಿರಬಹುದಲ್ಲವೇ ?
ವಂದನೆಗಳು-----------------ಕೆ.ಎ.ಭಟ್.