ಹೀಗೊಂದು ಗಜಲ್...

ಹೀಗೊಂದು ಗಜಲ್...

ಕವನ

ಕ್ಷುಧೆಯಿಂದ ದಣಿದು ತಮ್ಮ ಪೋಷಾಕುಗಳನ್ನೇ ಮಾರಿದೆವು

ಬರಿಮೈಯಾದೊಡೆ ಇರುಳಿನ ಕಗ್ಗತ್ತಲನ್ನೇ ಧರಿಸಿದೆವು

 

ಕಾವು ಸಹಿಸದೆ ತಮ್ಮಿಂದ ತಾವೇ ಬೆರ್ಪಟ್ಟು ಮಲಗಿದೆವು

ಚಳಿಯಿಂದ ಕಂಪಿದೊಡೆ ತಮ್ಮನ್ನೇ ಪುನಃ ಧರಿಸಿದೆವು

 

ನೆಲನಡುಗಿನಡಿಯಲ್ಲಿ ಶವವಸ್ತ್ರದ ಅಗತ್ಯವಿರಲಿಲ್ಲ

ಆದರೂ, ಶವಗಳು ಕಟ್ಟಡದ ಅವಶೇಷಗಳನ್ನೇ ಧರಿಸಿದೆವು

 

ಬೇದಲ್ ಹಿತ ಪೋಷಕುಗಳು ವರ್ಣರಂಜಿತವಾಗಿರಲಿಲ್ಲ

ಮತ್ತೇ ನಾವು ಆ ಪೋಷಾಕುಗಳನ್ನು ಉಲ್ಟಾ ಧರಿಸಿದೆವು!

 

ಉರ್ದು ಮೂಲ :  ಬೇದಲ್ ಹೈದರಿ

ಆಕಾರ ಗ್ರಂಥ :  ಲಾ ಜವಾಬ್ ಗಜಲೇನ್

ಕನ್ನಡಕ್ಕೆ         ಶಿಕ್ರಾನ್ ಶರ್ಫುದ್ದೀನ್ ಎಂ 

 

ಚಿತ್ರ್