ಹೀಗೊಂದು ಗಝಲ್
ಕವನ
ನೀರೊಳಗಿನ ಮೊಸಳೆಯಂತೆ ಸಂಚು ಬೇಡ ಬಾಳಲಿ
ಧರೆಯೊಳಗಿನ ನರಿಯಂತೆ ಹೊಂಚು ಬೇಡ ಬಾಳಲಿ
ಕಾಸರ್ಕದಲ್ಲಿರುವ ಕಾಯಿಯ ವಿಷದಂತೆ ಬದುಕ ಬೇಕೆ
ಕತ್ತರಿಸಿರುವ ಬಂಡೆಯ ತುಂಡುಗಳ ಅಂಚು ಬೇಡ ಬಾಳಲಿ
ತಾಯಿಬೇರು ಇಲ್ಲದೇ ಒಣಗಿರುವ ಮರದಂತೆ ಇರಬೇಕೆ
ಅಗ್ನಿ ಜ್ವಾಲೆಗೆ ಸಿಲುಕಿ ಕಾದಿರುವ ಹೆಂಚು ಬೇಡ ಬಾಳಲಿ
ಈಶನ ಮಂದಿರದ ಒಳಗೆ ನೆಮ್ಮದಿಯು ಸಿಗಲಾರದೆ
ಕಲಾಯಿ ಹೋಗಿರುವ ಪಾತ್ರೆಯಾದ ಕಂಚು ಬೇಡ ಬಾಳಲಿ
-ಹಾ ಮ ಸತೀಶ
ಚಿತ್ರ್