ಹೀಗೊಂದು ಗಝಲ್

ಹೀಗೊಂದು ಗಝಲ್

ಕವನ

ಈ ನೆಲಕೆ ಬರುವವರೆಲ್ಲ ತಾಯ ಗರ್ಭದಿಂದ ಬರಲೇ ಬೇಕಲ್ಲ

ಏನು ತಪ್ಪು ಒಪ್ಪುಗಳಿದ್ದರೂ ಜೊತೆಗೆ ತರಲೇ ಬೇಕಲ್ಲ

 

ಚಿಂತೆ ಇದ್ದರೆ ಮನದಿ ದೂರ ಹೋಗಿ ಕುಳಿತರಾಯಿತು

ಮತ್ತಷ್ಟು ಹದಗೆಡದ ಬಾಳಿನ ವ್ಯವಹಾರಕ್ಕೆ ಸಿಗಲೇ ಬೇಕಲ್ಲ

 

ಸೋಂಕು ಹರಡುವುದೆಂದು ಗೊತ್ತಿದ್ದರೂ ತಿರುಗುತ್ತೇವೆ

ಮನೆಯ ಒಳಗು ಹೊರಗು ಒಲವ ಇಡಲೇ ಬೇಕಲ್ಲ

 

ಚಿಂತಿಸುವ ಮನದಲ್ಲಿ ಚಿಂತನೆಯ ಕಂಡವರು ಯಾರೊ

ವ್ಯತ್ಯಾಸ ಆದಾಗ ನಾವು ಹಿಂಸೆಯನು ಪಡಲೇ ಬೇಕಲ್ಲ

 

ದಯೆ ಇಲ್ಲದ ಸಂಸಾರ ಒಂದು ಭಿಕ್ಷಾಪಾತ್ರೆ ಈಶ

ಅನುಭವಿಸಿದ ನೋವನು ಕೂಡಿಡಲು ಕಡಲೇ ಬೇಕಲ್ಲ

 

-ಹಾ ಮ ಸತೀಶ

 

ಚಿತ್ರ್