ಹೀಗೊಂದು ಗಝಲ್ !
ಕವನ
ಹೂವುಗಳು ಬಿರಿದಂತೆ ನಿನ್ನ ಮುಖಕಮಲ ಅರಳಲಿ ಗೆಳತಿ
ಚಂದ್ರಮನ ನಗುವಿನಂತೆ ಮತ್ತೆ ಮೈಮನ ನಲಿಯಲಿ ಗೆಳತಿ
ಒಣಗಿದ ಮನವೂ ರಾತ್ರಿಯು ಒಂದೇ ಹೇಳುವಿಯಾ ಏಕೆ
ಹತ್ತಿರವಿದ್ದರೂ ದೂರವಾಗಿಯೇ ನಿಲ್ಲುವ ಚಾಳಿ ಅಳಿಯಲಿ ಗೆಳತಿ
ಮತ್ತುಗಳು ಕೆಲವೊಮ್ಮೆ ಕಹಿ ಆದರೂ ಅದರ ಮೇಲೆ ನಂಬಿಕೆಯಿಲ್ಲವೆ
ತುಟಿಯ ಸಂಗಮದ ನಡುವೆಯೇ ಚೆಲುವು ಹೊರಳಲಿ ಗೆಳತಿ
ಖುಷಿಗಳನು ಕಾಣುತ ಯೌವನವ ಮುದಗೊಳಿಸಬೇಕು ನಿತ್ಯವೂ
ವಸಂತನ ಆಗಮನದ ಜೊತೆಗೆ ಪ್ರೀತಿಯು ತಣಿಯಲಿ ಗೆಳತಿ
ಮದಿರೆಯ ಕಂಗಳಿನ ಸನಿಹ ಮುಚ್ಚಿದ್ದ ರೆಪ್ಪೆಯೊಳಗೆ ಈಶನಿದ್ದಾನೆ
ಅಮಲಿನ ನಡುವೆಯೂ ಹೀಗೆಯೇ ಪ್ರೇಮ ಉರಿಯಲಿ ಗೆಳತಿ
-ಹಾ ಮ ಸತೀಶ, ಬೆಂಗಳೂರು
ಇಂಟರ್ನೆಟ್ ಚಿತ್ರ
ಚಿತ್ರ್
