ಹೀಗೊಂದು ಗಝಲ್

ಹೀಗೊಂದು ಗಝಲ್

ಕವನ

ಸಂಬಂಧಗಳಿಗೆ ಮರುಗಿ ಮೇಣದಂತೆ ಕರಗಿ ಗೋರಿ ಸೇರಿದೆಯಾ ಅಪ್ಪ

ಸಂಬಳಕಾಗಿ ಬೆವರರಿಸಿ ರಸ ರಹಿತ ಕಬ್ಬಾಗಿ ಗೋರಿ ಸೇರಿದೆಯಾ ಅಪ್ಪ||

 

ಕಷ್ಟಕಾಲಕೆ ನೆಂಟರಿಷ್ಟರ ಬಳಿ ಕೈಯ ಚಾಚ ಬೇಡವೆಂದು ಹೇಳಿದ್ದೆಯಲ್ಲವೇ

ಸ್ಪಷ್ಟಪಡಿಸುವಷ್ಟರಲ್ಲಿ ನನಗೆ, ನೀ ಸೊರಗಿ ಗೋರಿ ಸೇರಿದೆಯಾ ಅಪ್ಪ ||

 

ಅವ್ವನ ಸೆರಗಿನ ಮರೆಯಲ್ಲಿ ಓಝೋನ್ ಪರೆದೆಯ ನಿನ್ನಯ ಪ್ರೀತಿ ಅರಿಯದಾದೆ

ಭವ್ಯವಾದ ಬದುಕು ಕೊಟ್ಟು ಒಳಗೇ ಕೊರಗಿ ಗೋರಿ ಸೇರಿದೆಯಾ ಅಪ್ಪ||

 

ಜನುಮ ಕೊಟ್ಟು ನಿನಗೆ,ದುಃಖವ ಬಿಟ್ಟು ಬೇರೇನು ಕೊಡಲಿಲ್ಲ ನಾನು

ಶ್ರೀರಾಮನಂತೆ ರಕ್ಷಣೆ ನೀಡಿ ಮನೆಯ ಬೆಳಗಿ ಗೋರಿ ಸೇರಿದೆಯಾ ಅಪ್ಪ ||

 

ಬಿಜಲಿಯ ಗಜಲಿನಲ್ಲಡಗಿದ ಅನುಭವಾಮೃತವು ಜ್ಞಾನೋದಯ ತಂದಿತಲ್ಲ

ಬಾಂಧವ್ಯ ಬಂಧನದ ಒಳಗುಟ್ಟು ಸಾರಿ ಮಣ್ಣಾಗಿ ಗೋರಿ ಸೇರಿದೆಯಾ ಅಪ್ಪ||

 

-ಈರಪ್ಪ ಬಿಜಲಿ, ಕೊಪ್ಪಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್