ಹೀಗೊಂದು ಗಝಲ್!

ಹೀಗೊಂದು ಗಝಲ್!

ಕವನ

ಕುಪಿತವಿದ್ದರೂ ಸರಿ, ಮನಃ ನೋಯಿಸಲಾದರೂ ಆಗಮಿಸು;

ಆಗಮಿಸು: ನನ್ನ ಪುನಃ ಬಿಟ್ಟು ಹೋಗಲಾದರೂ ಆಗಮಿಸು; 

 

ಯಾರ್ಯಾರಿಗೆ ವಿಷದಪಡಿಸುವುದು, ವಿಂಗಡನೆಯ ಕಾರಣವನು;

ನೀ ಕುಪಿತವಿದ್ದರೂ ಸರಿ, ಕಾಲಮಾನಕ್ಕಾಗಿಯಾದರೂ ಆಗಮಿಸು!

 

ಈಕ್ಷಣವರೆಗೆ ಭ್ರಮಾಧೀನತೆಯುಳ್ಳ ಮನಕೆವಿದೆ ಉಮೇದುಗಳು,

ಈ ಕಟ್ಟುಕಡೆಯ ದೀವಿಗೆಗಳನ್ನ ಆರಿಸಲಾದರೂ ಆಗಮಿಸು!     

 

ಕೆಲವಧಿಯಿಂದ ವಂಚಿತವಿದ್ದೇನೆ ನಾ ಆಕ್ರಂದದ ಉತ್ಕರ್ಷತೆಯಿಂದ;

ಏ ಮನಶ್ಶಾಂತಿಯ ಚೈತನ್ಯವೇ, ನನ್ನ ರೋದಿಸಲಾದರೂ ಆಗಮಿಸು;

 

ನನ್ನ ವಾತ್ಸಲ್ಯದ ಪ್ರತಿಷ್ಠೆ ಅಲ್ಪವಾದರೂ ಸರಿ, ಉಳಿಸು ಅದನ್ನ;

ನನ್ನ ಹದುಳಿಸಲು-ಸಂತೈಸಲು ನೀ ಎಂದಿಗಾದರೂ ಆಗಮಿಸು!

 

ಸದೃಶವಾಗಿ, ನಿನ್ನಲ್ಲಿವಿದೆ ಬಾರದಿರುವ ಹಲವು ಕಾರಣಗಳು;

ಹಾಗೆಯೇ, ಪುನಃ ಹೋಗದಿರಲು ಎಂದಿಗಾದರೂ ಆಗಮಿಸು!

 

ಮೊದಲಿಂದಲೇ, ನಿಯಮನಿಬಂಧನೆಗಳಿರಲಿಲ್ಲ ಆದರೂ,

ಐಹಿಕ ಸಂಪ್ರದಾಯಗಳನ್ನ ಉಳಿಸಲಾದರೂ ಆಗಮಿಸು!     

***                        

ಉರ್ದು ಮೂಲ  : ಅಹ್ಮದ್ ಫರಾಝ್

ಕನ್ನಡಕ್ಕೆ         : ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು

ಚಿತ್ರ್