ಹೀಗೊಂದು ಚಿಂತನೆ
ಹೀಗೊಂದು ಚಿಂತನೆ.....
ನಮ್ಮ ದೇಶದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗಳು ನಡೆದಾಗ ಕೆಲವು ಸುಶಿಕ್ಷಿತರು ಮಾಧ್ಯಮಗಳ ಮುಂದೆ ಆಡುವ ಮಾತುಗಳನ್ನು ನೀವು ಕೇಳಿರಬಹುದು.ಅವರು ಘಟನೆಗಳಿಗೆ ಪ್ರತಿಕ್ರಿಯಿಸುವ ಭರದಲ್ಲಿ 'ನನಗೆ ಭಾರತದಲ್ಲಿ ಹುಟ್ಟಿದ್ದಕ್ಕೆ ನಾಚಿಯಾಗುತ್ತಿದೆ,ಭಾರತೀಯ ಎಂದು ಹೇಳಲು ಮುಜುಗರವಾಗುತ್ತದೆ'ಎಂದು ಹೇಳುತ್ತಾರೆ.ನನ್ನ ಪ್ರಕಾರ ಇಂತವರಿಗೆ ತಿಳುವಳಿಕೆಯ ಕೊರತೆ ಇದೆ.ಭಾರತದ ಭವ್ಯ ಪರಂಪರೆಯ ಬಗ್ಗೆ ಅರಿವಿರುನವ ಮತ್ತು ಈ ದೇಶದ ಇತಿಹಾಸ ತಿಳಿದುಕೊಂಡ ಯಾವೊಬ್ಬನು ಈ ರೀತಿ ಹೇಳಲಾರ.ಅಪರಾಧಗಳು ವ್ಯಕ್ತಿಗತವಾಗಿರುತ್ತದೆ.ಯಾವನೋ ಒಬ್ಬ ಅಸ್ವಸ್ಥ ನಾಗರಿಕ ಮಾಡುವ ತಪ್ಪಿಗೆ ದೇಶವನ್ನು ಬಯ್ಯುವುದು ಎಷ್ಟು ಸರಿ..? ಬೇಕಾದರೆ ಸಮಾಜವನ್ನು ದೂಷಿಸಲಿ ಆದರೆ ದೇಶವನ್ನು ಹೀಯಾಳಿಸುವುದು ತಪ್ಪಲ್ಲವೇ..?
'ಮೇರಾ ಭಾರತ್ ಮಹಾನ್'....
-@ಯೆಸ್ಕೆ