ಹೀಗೊಂದು ಮಿನಿಕಥೆ

ಹೀಗೊಂದು ಮಿನಿಕಥೆ

ಹೀಗೊಂದು ಮಿನಿಕಥೆ.....

ಟಿವಿ ನ್ಯೂಸ್ ಆಂಕರ್ ಒಬ್ಬ'ಸ್ತೀ ಸ್ವಾತಂತ್ರ್ಯ'ವಿಷಯದಲ್ಲಿ ಚರ್ಚೆ ಏರ್ಪಡಿಸಿ ಹೆಣ್ಮಕ್ಕಳು ತುಂಡು ಬಟ್ಟೆ ಹಾಕಿಕೊಳ್ಳುವುದನ್ನು ಪಬ್ ಗಳಿಗೆ ಹೋಗಿ ಕುಡಿಯುವುದನ್ನು ತಡರಾತ್ರಿ ಮನೆಗೆ ಬರುವುದನ್ನು ಸಮರ್ಥಿಸಿ ಮಾತನಾಡುತ್ತಿದ್ದ. ತನ್ನ ಚರ್ಚ ಕಾರ್ಯಕ್ರಮ ಮುಗಿಸಿ ಮನೆಗೆ ಹೋದಾಗ ಆತನ ಪತ್ನಿ ಚಿಂತಕ್ರಾಂತಳಾಗಿ ಕುಳಿತಿರುತ್ತಾಳೆ.ಕಾರಣ ಅವರ ನಡುವಯಸ್ಸಿನ ಮಗಳು ನಡುರಾತ್ರಿಯಾಗಿದ್ದರು ಮನೆಗೆ ಬಂದಿರುವುದಿಲ್ಲ.ಇದನ್ನು ಕೇಳಿ ಅಷ್ಟೋತ್ತು ಸ್ರೀಸ್ವಾತಂತ್ರ್ಯದ ಭಾಷಣ ಬಿಗಿದು ಬಂದಿದ್ದ ಆಂಕರ್ ನ ನಾಲಿಗೆ ಬಾಯಾರಿದ್ದರು ಮೈ ಮಾತ್ರ ಬೆವರಲು ಶುರುಮಾಡುತ್ತದೆ.ಇನ್ನೇನು ಪೊಲೀಸ್ ಕಂಪ್ಲೇಂಟ್ ಕೊಡಬೇಕು ಎನ್ನುವಷ್ಟರಲ್ಲಿ ನಾಲ್ವರು ಯುವಕರು ಅವರ ಮಗಳನ್ನು ಕಾರಿನಲ್ಲಿ ಬಂದು ಮನೆಯ ಗೇಟಿನ ಬಳಿ ಬಿಟ್ಟು ಹೋಗುತ್ತಾರೆ.ನಶೆಯಲ್ಲಿದ್ದ ಅವಳಿಗೆ ಸರಿಯಾಗಿ ಹಜ್ಜೆ ಹಾಕಲು ಕೂಡ ಸಾಧ್ಯವಾಗುತ್ತಿರಲಿಲ್ಲ.ಇದನ್ನು ನೋಡಿದ ಮೇಲೆ ಟಿವಿಯಲ್ಲಿ ಆಂಕರ್ ಆಗಿ ಸ್ತೀಸ್ವಾತಂತ್ರ್ಯದ ಬಗ್ಗೆ ಮಾತನಾಡಿ ಬಂದಿದ್ದವ ಮನೆಯಲ್ಲಿ ಅಪ್ಪನಾಗಿ ತನ್ನ ಮಗಳ ಅವಸ್ಥೆ ನೋಡಿ ಮೂರ್ಛೆ ತಪ್ಪಿ ಬೀಳುತ್ತಾನೆ.

-@ಯೆಸ್ಕೆ