ಹೀಗೊಂದು ಯುದ್ಧದ ಕಥೆ...
ಒಂದು ದಿನ ನಾಡು ಮಲಗಿದ ರಾತ್ರಿಯಲಿ
ಮಧ್ಯರಾತ್ರಿದಟ್ಟ ಕಾರಿರುಳಲಿ ನಿರೀಕ್ಷೆಯಲಿ
ಕಟ್ಟುತಿಹ ಹೊಸ ಮನೆಯ ಮುಂಭಾಗದಲಿ
ಅದೇನೋ ಹೊಡೆದಾಟ ಕೂಗಾಟದ ಸದ್ದು....
ಮತ್ತಿನಲಿದ್ದ ಇಬ್ಬರು ಅವಾಚ್ಯ ಯುದ್ಧದಲಿ
ಕೈ-ಕೈಯ ಮಿಗಿಲಾಯಿಸಿ ಘೋರ ಜಗಳದಲಿ
ಸಿಕ್ಕಿದ್ದರಲೇ ಪರಸ್ಪರ ಹಾರಾಟ ಹೊಡೆದಾಟ;
ದಾರಿ ಹೋಕರು ಸಂಬಂಧವಿರದಂತೆ ಓಡಾಟ....
ಬಾಗಿಲ ತೆಗೆದು ಆ ಭಯಾನಕ ದೃಶ್ಯ ನೋಡೆ
ವಿಶ್ವ ಮಾನವ ಪ್ರಜ್ಞೆ ಎನ್ನಲಿ ಜಾಗೃತಗೊಂಡು:
ಬಳಿಸಾರಿ ಘರ್ಜಿಸಿ ; ಆರಕ್ಷಕರನು ನೆನಪಿಸಿ
ಘೋರ ಸಾವಿನ ಹೊಡೆದಾಟವ ನಿಲ್ಲಿಸಿದೆನಲ್ಲ!
ಇಂದು ನಡೆಯುತಿರುವ ಉಕ್ರೇನ್-ರಷ್ಯಾಗಳ
ರಣ ಘೋರ ಯುದ್ಧ; ಎಲ್ಲರ ತಟಸ್ಥ ವೀಕ್ಷಣೆ!
ವಿಶ್ವ ರಾಷ್ಟ್ರ ಪ್ರಜ್ಞೆ ಯಾರಲೂ ಕಾಣುತಿಲ್ಲವೇ
ವಿನಾಶವನು ನೋಡುತಲಿ ಎಲ್ಲರ ಕಾಲಹರಣ!
ಖಂಡಿತ ಮೂರನೇ ಮಹಾಯುದ್ಧಕೆ ಹೋಗದಿರಿ
ಎಲ್ಲಾ ರಾಷ್ಟ್ರನಾಯಕರೇ: ಶಾಂತಿ ಧ್ವಜವ ಹಿಡಿದು
ರಷ್ಯಾದೊಳಗೆ ಒಮ್ಮೆಗೇ ನೀವೆಲ್ಲರೂ ನುಗ್ಗಿ ಬಿಡಿ
ಪ್ರಾಣ-ದೇಶದ ರಕ್ಷಣೆಯನು ನೀವು ಮಾಡಿ ಬಿಡಿ!
ದಯವಿಟ್ಟು... ವಿಶ್ವ ರಾಷ್ಟ್ರ ಪ್ರಜ್ಞೆಯನು ಬಡಿದೆಬ್ಬಿಸಿ ಬಿಡಿ!!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ