ಹೀಗೊಂದು ಸಾವು

ಹೀಗೊಂದು ಸಾವು

ಬರಹ

೧ ಆ ವ್ಯಕ್ತಿ
ನಿನ್ನೆ ಇದ್ದ
ಬದುಕಿದ್ದ . ರಕ್ತ
ಮೈತುಂಬಾ ಹರಿಯುತ್ತಿತ್ತು
ಕೂಗಾಡುತ್ತಿದ್ದ, ಅಳುತ್ತಿದ್ದ
ನಗುತ್ತಿದ್ದ ಮತ್ತು ಕನಸು ಕಾಣುತ್ತಿದ್ದ
ಭಾವನೆಗಳ ಬಿತ್ತಿ ಬೆಳೆಯುತ್ತಿದ್ದ

೨ ಈಗ
ತಣ್ಣಗಾಗಿದ್ದಾನೆ
ಕೊರಡಿನಂತಾಗಿದ್ದಾನೆ
ಅದೇ ಮುಖ
ಕೊಂಚವೂ ಬದಲಿಲ್ಲ
ನಗುತ್ತಲೇ ಸತ್ತಿರಬೇಕು
ಇಲ್ಲ, ಸತ್ತು ನಕ್ಕಿರಬೇಕು
ಒಂದೇ ಕ್ಷಣ
ಹೃದಯ ಬಡಿತ
ಸ್ಥಬ್ಧ , ನಿಶ್ಯಬ್ದ
ಚಿರ ಮೌನ ಶಾಂತಿ

೩ ಅದು ಸಾವಿನ ಮನೆ
ಅಲ್ಲಿ ಮೌನವಿಲ್ಲ
ಅಳುವಿಗೆ ಕೊನೆಯಿಲ್ಲ
ನಿಜವಾದ ಅಗಲಿಕೆಯ ನೋವು
ಕೆಲವರಿಗೆ ಮಾತ್ರ
ಮಿಕ್ಕವರು ಹಠಕ್ಕೆ೦ಬ೦ತೆ
ಅತ್ತವರು
ಅದೊಂದು ನಾಟಕ ರಂಗ
ಕೆಲವರದು ನಟನೆ
ಕೆಲವರದು ನೈಜ
ಒಟ್ಟಿನಲ್ಲಿ
ಸಾವು ಅಲ್ಲಿದ್ದದ್ದು ನಿಜ
ಹರೀಶ್ ಆತ್ರೇಯ