ಹೀರೋ ಅಲ್ಲದ ಹೀರೋ ಕಥೆ..!

ಹೀರೋ ಅಲ್ಲದ ಹೀರೋ ಕಥೆ..!

ಕೋಮಲ್ ಗೊತ್ತಲ್ಲ. ಹೀರೋ ಅಂತ ಯಾರೂ ಒಪ್ಪಿಕೊಂಡಿಲ್ಲ. ಯಾಕೆಂದ್ರೆ, ಇದಕ್ಕೆ ಉತ್ತರ ಯಾರಿಗೂ ಗೊತ್ತಿಲ್ಲ. ಸ್ವತ: ಕೋಮಲ್ ತಮ್ಮ ಹೀರೋಗಿರಿಗೆ ಸಕಲ ಸರ್ಕಸ್ ಮಾಡಿದ್ದಾರೆ. ಗರಗಸ ಬಂದ್ಮೇಲೆ ಎಲ್ಲವು ನೆಟ್ಟಗೆ ಆಗುತ್ತಿದೆ. ಗೋವಿಂದಾಯನಮ; ಕೋಮಲ್ ಗೆ ಬಂದ ಹೀರೋಗಿರಿಯ ಪಟ್ಟವನ್ನ ಗಟ್ಟಿಗೊಳಿಸಿದೆ. ಆದ್ರೂ, ಯಾಕೋ ಜನರಿಗೆ ಕೋಮಲ್ ಹೀರೋ ಅನಿಸೋದೇಯಿಲ್ಲ.  ಒಬ್ಬ ಕಾಮಿಡಿಯೆನ್ ಅನಿಸಬಹುದು. ಬಣ್ಣ ತೆಗೆದಾಗಲ್ಲಂತೂ ನಿಜಕ್ಕೂ ಏನೂ ಅನಿಸೋದಿಲ್ಲ. ಇವನು ಹೀರೋನಾ..? ಅನ್ನೋ ಮನಸ್ಥಿತಿ. ಮೊನ್ನೆ ಆಗಿದ್ದು ಅದೇ. ಸ್ವತ: ಆ ಕೆಟ್ಟ  ಅನುಭವನ್ನ ಕೋಮಲ್ ಹೇಳಿಕೊಂಡ್ರು. ಅದು ಮಾತು ಮಾತಿನಲ್ಲಿಯೇ ಹರೆದು ಬಂದ ಸತ್ಯ. ಕೋಮಲ್ ಮಾತಿನ ಲಹರಿನೇ ಹಾಗೆ. ಎಲ್ಲೂ ಫಿಲ್ಟರ್ ಇರೋದಿಲ್ಲ...

ಹಾಗೆ ಕೋಮಲ್ ಮಾತಿಗಿಳಿದಿದ್ದು ಹಸಿರು ಮನೆಯಲ್ಲಿ. ನಾವು ಪ್ರೆಸ್ ಮೀಟ್ ಗೆ ಸದಾ ಸೇರೋ ಗ್ರೀನ್ ಹೌಸ್ ಅಂತಲೇ ಕರೆಸಿಕೊಳ್ಳುವ ಬಹಳ ಹಳೆಯ ಹೋಟೆಲ್. ಇಲ್ಲಿಯೇ ಅನೇಕ ಸಿನಿಮಾ ಪ್ರೆಸ್ ಮೀಟ್ ಗಳು ನಡೆಯುತ್ತವೆ. ಗಾಂಧಿನೇ ಇಲ್ಲದ ಗಾಂಧಿ ನಗರದಲ್ಲಿರೋ ಈ ಹೌಸ್ ನಲ್ಲಿ `ನಂದೀಶ' ಸಿನಿಮಾ ಪತ್ರಿಕಾಗೋಷ್ಠಿ ಆರಂಭವಾಗಬೇಕು. ಅದಕ್ಕೂ ಮೊದಲೇ ಕೋಮಲ್ ಮಾತು ಆರಂಭಿಸಿದ್ದರು. ಆಗ ತಮ್ಮ ಸ್ವಿಜರ್ ಲ್ಯಾಂಡ್ ಅನುಭವ ಒಂದು ಫ್ಲೋನಲ್ಲಿ ಹರೆಯಲಾರಂಭಿಸಿತು.

ಕೋಮಲ್ ನಿರ್ಮಾಣದಲ್ಲಿ ನಂದೀಶ ಬರುತ್ತಿದೆ. ಗೋವಿಂದಾಯನಮ: ಸಿನಿಮಾದಲ್ಲಿ ಕಾಣಿಸಿಕೊಂಡ ಪಾರುಲ್ ಹಾಗೂ ಕೋಮಲ್ ಜೋಡಿ ಇಲ್ಲು ಇದೆ. ಇದೇ ಚಿತ್ರದ   ಒಂದು ಹಾಡಿನ ಚಿತ್ರೀಕರಣಕ್ಕೆ ತಂಡ ಸ್ವಿಜರ್ ಲ್ಯಾಂಡ್ ಗೆ ಹೋಗಿತ್ತು. ಅದಕ್ಕೆನೇ ಅಲ್ಲಿ ಇಡೀ ತಂಡ ತರಾತುರಿಯಲ್ಲಿ ಓಡಾಡುತ್ತಿತ್ತು. ಹಾಗೇನೆ ಎಲ್ಲವು ರೆಡಿಯಾಯಿತು. ಆಗ ಅಲ್ಲಿದ್ದ ಮ್ಯಾನೇಜರ್ ಕೋಮಲರನ್ನೇ ಕೇಳಿದ್ರಂತೆ, ಇಲ್ಲಿವರೆಗೂ ಶೂಟಿಂಗ್ ತಯಾರಿಯೇನೋ ಆಯಿತು. ಆದ್ರೆ, ಹೀರೋ ಎಲ್ಲಿ, ಇನ್ನೂ ಯಾಕೆ ಬಂದಿಲ್ಲ ಅಂತ, ಆಗ ಕೋಮಲ್ ಸ್ವತ: ನಾನೇ ಹೀರೋ ಅಂದು ಹೋದ್ರಂತೆ, ಯಾವಾಗ ಕೋಮಲ್ ಮೇಕಪ್ ಹಾಕಿ ಕೊಂಡು ಬಂದ್ರೋ. ಆಗ ಆ ವ್ಯಕ್ತಿ ಶಾಕ್..

ತಮ್ಮ ಈ ಅನುಭವವನ್ನ  ಹೇಳುತ್ತಲೇ ಕೋಮಲ್, ರಜನಿಕಾಂತ್  ಅವ್ರಿಗೆ ಆದ ಒಂದು ಘಟನೆ ಹಂಚಿಕೊಂಡ್ರು, ರಜನಿಗೆ ಅದು ರೋಬೋ ಸಿನಿಮಾ ಶೂಟಿಂಗ್ ವೇಳೆ. ಬೆಂಗಳೂರಿನ ಒಂದು ಜಾಗದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿಯೇ ಇದ್ದ ಮಂಗಿಲಾಲ್ ರಜನಿ ಪರಿಚಿತ. ಥಟ್ಟನೆ ರಜನಿ ನೋಡುತ್ತಲೇ, ಏನಪ್ಪ, ತಲೆಕೂದಲು ಹೋದವು. ಏನು, ಈಗ ಏನ್ ಮಾಡ್ತಿದ್ದಿಯಾ..? ಸಿನಿಮಾರಂಗದಿಂದ ನಿವೃತ್ತಿ ಪಡೆದಿರಬೇಕಲ್ಲವೇ ಅಂತ ಆ ವ್ಯಕ್ತಿ ರಜಿನಿಗೆ ಕೇಳಿದ್ರಂತೆ. ಆಗ ರಜನಿ ನಿವೃತ್ತಿ ಏನೂ ಇಲ್ಲ. ರೋಬೋ ಅನ್ನೋ ಸಿನಿಮಾ ಮಾಡ್ತಿದ್ದೀನಿ ಅಂತ  ವಿನಯದಿಂದ ಹೇಳಿದ್ರಂತೆ, ಆ ಮಂಗಿಲಾಲ್ ಹೀರೋ ಯಾರು ಅಂತ ಕೇಳಿದಾಗ ರಜಿನಿ ಶಾಕ್. ತನ್ನತ್ತ ಕೈ ಬೀಸುತ್ತಿದ್ದ ಅಭಿಮಾನಿಗಳು ಸೂಪರ್ ಸ್ಟಾರ್ ರಜಿನಿ ಅಂತ ಕೂಗಿದ್ರೂ ಮಂಗಿಲಾಲ್ ಗೆ ಏನೂ ಅನಿಸಲಿಲ್ಲ. ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ ಅಂದಾಗ, ಅದೇ ಮಂಗಿಲಾಲ್ ರೋಮಾಂಚನಗೊಡ್ರಂತೆ...

ಬಣ್ಣದ ಮಂದಿಯ ಕತೆಗಳೇ ಹೀಗೆ, ಬಣ್ಣ ಹಚ್ಚಿಕೊಂಡು ಕ್ಯಾಮರಾ ಮುಂದೆ ಬಂದ್ರೆ ಹೀರೋ. ಹಾಗೇ ಬಂದ್ರೆ, ಏನೂ ಅಲ್ಲ...ಅದಕ್ಕೆ ಒಂದು ಕಡೆ ರಜನಿ. ಇನ್ನೊಂದು ಕಡೆ ಕೋಮಲ್ ಕುಮಾರ್. ಹುಡುಕುತ್ತಾ ಹೋದ್ರೆ, ನಟರ ಈ ಭಯಕಂರ ಅನುಭವಾಮೃತ ಹೊರಳಬೀಳುತ್ತಲೇ ಹೋಗುತ್ತವೆ...

Comments

Submitted by gopinatha Tue, 12/25/2012 - 12:26

ಜೇವೂರ್ ಅವರೇ ನಿಮ್ಮ ಬರಹ ಇಷ್ಟವಾಯ್ತು. ಹಾಗೆ ಕೆಲವರನ್ನು ಸಿನೇಮಾದಲ್ಲಿ ಮಾತ್ರ ನೋಡುವುದೇ ಸರಿ ಅನ್ನಿಸುತ್ತೆ.