ಹರಡೆಲ್ಲ ಹೃದಯದೊಳು ಪ್ರೀತಿಯನು,
ನಿರಾಕಾರಿ ನೀರಿನಂತೆ....
ನೀಡು ನೀ ಸಾಂತ್ವನವ,
ಕಾಣದಿಹ ತಂಗಾಳಿಯಂತೆ...
ಉರಿ ನೀನು ಶಾಂತಿಯ ಹಣತೆಯಲಿ,
ದಾರಿದೀವಿಗೆಯಾಗಿ ಸತ್ಯಾಗ್ನಿಯಂತೆ...
ಆಶ್ರಯಿಸು ಮುಗ್ದತೆಯ,
ಅನಂತ ಆಗಸದಂತೆ...
ಕಷ್ಟಗಳ ಭಾರವ ಭೂಮಿಯಂದದಿ ಪೊತ್ತು,
ಹಸಿದ ಹಸುಳೆಗಳಿಗೆ ನೀಡುತಿರು ತುತ್ತು ಹುಚ್ಚಪ್ಪನಾಗಿ...