ಹುಚ್ಚಪ್ಪಾ

ಹುಚ್ಚಪ್ಪಾ

ಕವನ

ತೋಳಗಳ ನಡುವೆ ತೋಳ್ಬಲವ ತೋರದಿರು,
ತಾಳ್ಮೆಯಿಂ ನಡೆಸು ಸತ್ಯಾಗ್ರಹವ.....

ಕಾಯಕವ ನಡೆಸುತಿರು ಕಾಣದಿಹ ಕೈಗಳಿಂ,
ಕಾಣದಾ ಕಣ್ ತೆರೆದು ಬೆಳಗುವದು ಜಗವಾ....

ನಿನ್ನೊಳು ಸಂಭವಿಸಿ ದಾರಿಯನು ತೋರುವನು,
ಉರಿಯುತಿರೆ ಮನದೊಳ್ ನಂಬಿಕೆಯ ನಂದಾದೀಪ ತಿಳಿ ಹುಚ್ಚಪ್ಪಾ...