ಹುಟ್ಟಿದ ಹಬ್ಬಕೆ ಮಾತೆಯ ದರ್ಶನ
ಕವನ
ಹುಟ್ಟಿದ ಹಬ್ಬಕೆ ನೆಟ್ಟಗೆ ನಡೆದೆವು
ಬೆಟ್ಟದ ತಾಯಿಯ ಸನ್ನಿಧಿಗೆ
ಮೆಟ್ಟಿಲನೇರಲು ತಟ್ಟನೆ ಕಂಡಿತು
ಕಟ್ಟಿದೆ ತೋರಣ ಬಾಗಿಲಿಗೆ
ನಾದವ ಕೇಳುತ ಮೋದದಿ ನಡೆದೆವು
ಹಾದಿಯಲೆಲ್ಲೆಡೆ ಜನರಿಹರು
ಭೇದವ ಮರೆಯುತ ಕಾದಿಹರೆಲ್ಲರು
ಈದಿನ ಶ್ರಾವಣ ತೊಡಗಿಹುದು
ಅಲ್ಲಿಯೆ ಕೊಂಡೆವು ಮಲ್ಲಿಗೆ ಹೂವನು
ಸಲ್ಲಿಸೆ ತಾಯಿಗೆ ಭಕ್ತಿಯೊಳು
ಚೆಲ್ಲುವ ಪರಿಮಳ ಮಲ್ಲಿಗೆ ಮಾಲೆಯ
ಮೆಲ್ಲಗೆ ಮಾತೆಗೆ ತೊಡಿಸಿದರು
ಕರವನು ಜೋಡಿಸಿ ಚರಣದಿ ನಿಂದಿಹೆ
ಹರಸಲಿ ನನ್ನನು ಜಗದವ್ವೆ
ದೊರೆತ ಪ್ರಸಾದವ ಕಿರುತುಣುಕಾಗಿಸಿ
ಶಿರದಲಿ ಇರಿಸಿದ ಹಡೆದವ್ವೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್