ಹೂಮನಸ ಹೃದಯದಲಿ

ಹೂಮನಸ ಹೃದಯದಲಿ

ಕವನ

ಹೂಮನಸ ಹೃದಯದಲಿ

ನನ್ನ ಸೆಳೆಯುತ ನಡೆದೆ

ಚೆಲುವಿನಲಿ ತನುವೊಳಗೆ ನಿನ್ನ ತುಂಬಿ

ಮನದಾಸೆ ಏನಿದೆಯೊ

ಹೇಳಲಾರದೆ ಹೋದೆ

ಬದುಕಿನಲಿ ಸವಿ ಜೇನ ಒಲವ ತುಂಬಿ

 

ಸುಮ ಮಧುರ ಭಾವದೊಳು

ಇಳೆಯರಳಿ ನಲಿಯುತಿರೆ

ನನ್ನಾಕೆ ಸೇಲೆಯಲಿ ಬಳಿಯೆ ನಿಂದು

ಮೌನ ಮುರಿಯುತ ನಾನು

ಪ್ರೀತಿ ಕಡಲಲಿ ತೇಲಿ

ತೃಪ್ತನಾಗುತ ಸಾಗೆ ಆತ್ಮ ಬಿಂದು

 

ಗುಣ ಗಣವು ಜೊತೆಗಿರಲು

ಹರಸುತಿರೆ ಸುಖವಿರಲು

ಬೆರೆಯುತಲೆ ರಶ್ಮಿಯೊಳು ಬೆಳಕುಯಿಂದು

ಕರದೊಳಗಿನಾ ಬೆಸುಗೆ

ಸುಖ ಶಾಂತಿ ನೆಮ್ಮದಿಯ

ಕೊಡುತ ಸಾಗುತಲಿರಲು ನನಸುಯೆಂದು

 

-ಹಾ ಮ ಸತೀಶ 

 

ಚಿತ್ರ್