ಹೃದಯದ ತುಂಬ ಅದೇ ಬಿಂಬ !

ಹೃದಯದ ತುಂಬ ಅದೇ ಬಿಂಬ !

ಬರಹ

ರಾತ್ರಿ, ಕನಸಿನಲ್ಲಿ ದಂತದಂಥ,
ಬೆಳದಿಂಗಳ ಬಾಲೆಯ ಕಂಡೆ.

ಮುಂಜಾನೆ ಎದ್ದು ಹೊರಗೆ ಸಾಗಿ,
ಸಂಭ್ರಮದ ಹಕ್ಕಿಯ ಕಂಡೆ.

ಆಗಸಕೆ ಇಟ್ಟ ಕುಂಕುಮದಂತ,
ಅರುಣೋದಯವ ಕಂಡೆ.

ಬೆಳಗಿನ ಅಂದ ಚೆಂದ ಆನಂದದ,
ಮೃಗಪಕ್ಷಿಗಳ ನಾ ಕಂಡೆ.

ಮೂಡುವ ರವಿಯ ನೋಡಿ ಕವನ ಬರೆಯುವ,
ಕವಿಯ ಕಂಡೆ, ಬೆರಗುಗೊಂಡೆ !

ಈ ಪರಿಸರದ ಸಂಭ್ರಮದ ಸನ್ನಿವೇಶವ,
ಕಂಡು ನಾ ಮನಸೋತೆ, ಮಾರುಹೋದೆ !

ಬಾಡಿದ ಬಳ್ಳಿಯಂತೆ ಕವಿಯು ಜ್ಙಾನವಿಲ್ಲದೆ
ನೆಲಕೆ ಒರಗಿದನು.

ಇದ ನೋಡಿದ ನಾನು ಆಸ್ವತ್ರೆಗೆ,
ಕವಿಯನ್ನು ಕರೆದ್ಯೊದೆನು.

ಆತನ ಜೊತೆಯಲ್ಲಿ ನಾನು ಸಹ "ಎಕ್ಸರೆ" ತೆಗಿಸಿದೆನು.

ಕವಿಯ ಎಕ್ಸರೆಯನ್ನು ವೀಕ್ಷಿಸಿದಾಗ ಸುಂದರ,
ಕವಿ ಹೃದಯದ ಕವನವ ಕಂಡೆ.

ನನ್ನ ಎಕ್ಸರೆಯನ್ನು ಸ್ವಯಂ ವೀಕ್ಷಿಸುವಾಗ ಬೆಳಗಿನ
ಎಲ್ಲಾ ಸವಿಅನುಭವ ಕಾಣುವೆ ಎಂದುಕೊಂಡೆ.

ಆದರೆ,

"ಅಲ್ಲಿ ಕಂಡದ್ದು ಬೆಳದಿಂಗಳ ಬಾಲೆಯ ಬಿಂಬ,
ಅದೇ ತುಂಬಿತ್ತು ನನ್ನ ಹೃದಯದ ತುಂಬ !

...........................ಅದೇ ತುಂಬಿತ್ತು ನನ್ನ ಹೃದಯದ ತುಂಬ !"

ಸ್ನೇಹದಿಂದ
ಗಣೇಶ್ ಪುರುಷೋತ್ತಮ