ಹೃದಯದ ಭಾವ

ಹೃದಯದ ಭಾವ

ಬರಹ

ಹೃದಯದ ಭಾವ

ಹೃದಯದ ಭಾವನೆ ಅರಳಿ

ಪ್ರೀತಿಯ ಕಡಲು ಉಕ್ಕುತ್ತಿದೆ

ಕನಸ್ಸಿನ ಪ್ರೀತಿಯ ಹಕ್ಕಿ

ಎದೆಯ ಗೂಡಲಿ ಅವಿತಿದೆ

ಬಂಧವ ಬೆಸೆಯುವ ಪ್ರೀತಿ

ಕಣ್ಣಿಗೆ ಲೋಕವ ಮರೆಮಾಡಿದೆ

 

ಪ್ರೀತಿಯ ಸಿಂಚನ ಮಿಡಿದು

ಮನದ ಹಕ್ಕಿ ಹಾರುತ್ತಿದೆ

ಬದುಕಿನ ಅಲೆಗಳು ಕಲೆತು

ಪ್ರೀತಿಯ ಸಾಗರವ ಸೃಷ್ಟಿಸಿವೆ

ಕನಸ್ಸಿಗೆ ಚೈತನ್ಯ ಮೂಡಿ 

ಮನಸ್ಸಿನ ಭಾರ ಕರಗುತ್ತಿದೆ

 

ಎದೆಯ ಬಾಂದಳದ ತೋಟದಲ್ಲಿ

ಬಣ್ಣ ಬಣ್ಣದ ಹೂಗಳು ಅರಳುತ್ತಿವೆ

ಜೀವದೊಳಗಿನ ಮೌನ ಮುರಿದು

ಪ್ರೀತಿಯ ನುಡಿಯ ಆಡುತ್ತಿದೆ

ಬಾಳಿನ ಕತ್ತಲ ಬಾನಿನಲ್ಲಿ

ಸುಂದರ ನಕ್ಷತ್ರ ಮಿನುಗುತ್ತಿದೆ.

    - ಮಾ.ಕೃ.ಮಂಜು