ಹೃದಯವೇ ಎಲ್ಲಿರುವೆ..?

ಹೃದಯವೇ ಎಲ್ಲಿರುವೆ..?

ಕವನ

ಯಾರದ್ದೋ ಹೃದಯವ ಕಿತ್ತು

ನನ್ನ ಕೈಯೊಳಗೆ ಒಳಗೇ ಇತ್ತು

ನೀ ಎಲ್ಲೋ ಓಡಿದ ಹೊತ್ತು

ಪ್ರೀತಿಗೆ ಬಂತು ಕುತ್ತು ಅಪತ್ತು

 

ಅಪಸ್ವರಗಳ ನಡುವೆ ನಡೆದಿತ್ತು

ಹೊಯ್ದಾಟ ಬಡಿದಾಟಗಳ ಗತ್ತು

ಸವಿಯಿರುವ ತನುವಿನಾಳವು ಅತ್ತು

ಮನದೊಳಗಿನ ಮಳೆಯಲ್ಲಿ  ಚಿತ್ತು

 

ಜಾತಿ ಸೋರಿ ಹೋದ ಹೊತ್ತು

ವಿಜಾತಿಯ ಬಳಗದೊಳು ಕೈಹಿಡಿದಿತ್ತು

ಆದರೂ ಸಿಗಲಿಲ್ಲ ಬಾಳಿಗೆ ನತ್ತು

ಒಂಟಿಯಾಗಿಯೇ ಬದುಕು ಮಲಗಿತ್ತು

-ಹಾ ಮ ಸತೀಶ

 

ಚಿತ್ರ್