ಹೃದಯ ಕಲಕುವ ಗಾಯಕ..!

ಹೃದಯ ಕಲಕುವ ಗಾಯಕ..!

ಹೃದಯ ಕನಲುವ ಗಾಯನ..!ಕಂಠಸಿರಿಯ ತಾಕತ್ತಿಗೆ ಕಲ್ಲೂ ಕರಗುವುದು..!ನೋವಿನ ಭಾವಕ್ಕೆ ಆಪ್ತ ಸ್ವರ ಮಾಧುರ್ಯ.ಗಾಯಕ ಮುಖೇಶ್ ಇಲ್ಲದ ಈ 39 ವರ್ಷಗಳು. ಅಗಲಿದ ಗಾಯಕನಿಗೆ ನಮ್ಮ ಗೀತ ನಮನ..
-----
ಹೃದಯ ಕಲಕುವ ಧ್ವನಿ. ಒಮ್ಮೆ ಕೇಳಿದರೆ ಮೈಮರೆತು ಬಿಡೋ ಸೆಳೆತ. ಮಾಧುರ್ಯದ ಸ್ಪರ್ಶ ಕಂಠಸರಿಯಲ್ಲಿದ್ದರೂ, ಹಾಡಿದ್ದ ಬಹುತೇಕ ಹಾಡುಗಳು ದರ್ದ ಭರೆ ನಗ್ಮೆ. ಶೋ ಮ್ಯಾನ್ ರಾಜ್​ ಕಪೂರ್​ಗೆ ಹೊಂದಿ ಕೊಳ್ಳುತ್ತಿದ್ದ ಈ ಧ್ವನಿಯ ಹೆಸರು ಮುಖೇಶ್. ಪೂರ್ಣ ಹೆಸರು ಮುಖೇಶ್ ಚಂದ್ ಮಾಥುರ್. ಮುಖೇಶ್ ಅಂತಲೇ ಚಿರಪರಿಚಿತರು. ನಮ್ಮನ್ನಗಲಿ ಈಗ 39 ವರ್ಷಗಳೇ ಉರುಳಿವೆ. ಆದರೆ, ಈ ಗಾಯಕನ ಹಾಡು ಇನ್ನೂ ಜೀವಂತ. ಬನ್ನಿ, ಹೃದಯ ಸ್ಪರ್ಶಿಸೋ ಈ ಮಾಂತ್ರಿಕನ ಹಾಡುಗಳನ್ನ ಕೇಳೋಣ.

ಕಲ್ ಖೇಲ್ ಮೇ..ಹಮ್ ಹೋ ನಾ ಹೋ  ಎಲ್ಲ ಕಾಲದಲ್ಲೂ ಪ್ರಸ್ತುತ...!

ಮುಖೇಶ್​ ಹಾಡಿದರೆ ಕಲ್ಲು ಕರಗುತ್ತದೆ.ಇದು ಮುಖೇಶ್ ಗಾಯನಕ್ಕೆ ಇದ್ದ ಶಕ್ತಿ. ಪ್ರಚಲಿತವಾಗಿದ್ದ ಈ ಮಾತು, ಸತ್ಯ ಅನ್ನೋದಕ್ಕೆ ತುಂಬಾ ಹಾಡುಗಳಿವೆ. ಮೇರಾ ನಾಮ್ ಜೋಕ್ ಚಿತ್ರದ ಹಾಡು ಕೇಳಿದರೆ ಸಾಕು. ಹೃದಯ ಕನಲುತ್ತದೆ..

ಜಾನೇ ಕಹಾ ಗಯೇ ಓದಿನ್ ಪ್ರೇಮಿಮಿಗಳ ಪರಮ ಗೀತೆ...!

ಮುಖೇಶ್ ಭಗ್ನ ಪ್ರೇಮಿಗಳ ಪ್ರತಿನಿಧಿಯಂತೆ ಕಂಡೋರು. ಶೋ ಮ್ಯಾನ್ ರಾಜ್​ ಕಪೂರ್ ತೆಗೆಯುತ್ತಿದ್ದ ಸಿನಿಮಾಗಳಿಗೆ ಮುಖೇಶ್ ಖಾಯಂ ಗಾಯಕರು. ಕಾರಣ, ಮುಖೇಶ್ ಧ್ವನಿ ರಾಜ್​ ಕಪೂಗೆ ತುಂಬಾನೆ ಹೊಂದುತ್ತಿತ್ತು. ಸಂಗಮ ಚಿತ್ರದ ಒಂದೇ ಒಂದು ಹಾಡು ಅದನ್ನ ಸಾಬೀತು ಮಾಡುತ್ತದೆ.ನೋಡಿ.

ಸಂಗಮ್ ಚಿತ್ರದ ದೋಸ್ತ ದೋಸ್ತ ನಾ ರಹಾ ಗೀತೆ ಎದೆ ತಟ್ಟುತ್ತದೆ..!

ಮುಖೇಶ್ ಹಿನ್ನೆಲೆ ಗಾಯಕಷ್ಟೇ ಸೀಮಿತವಾಗಿರಲಿಲ್ಲ. ಲೈವ್ ಕಾನ್ಸರ್ಟ್ ನಲ್ಲೂ ಹಾಡಿದ್ದು ಇದೆ. ಆ ಕಪ್ಪು-ಬಿಳುಪು ದಿನಗಳಲ್ಲಿಯೇ ಮುಖೇಶ್ ನೇರವಾಗಿ ಜನರ ಎದುರು ಬಂದು, ಹಾಡಿದರು. ಆ ಘಳಿಗೆಯಲ್ಲಿ ಕಬೀ..ಕಬೀ ಚಿತ್ರದ ಹಾಡು ಪ್ರಚಲಿತ. ಅದರ ನೇರ ಗಾಯನವೂ ಎಲ್ಲರ ಹೃದ ಮುಟ್ಟಿತ್ತು.

ಮುಖೇಶ್ ನಮ್ಮನ ಕಾಡೋಕೆ ಇನ್ನೂ ಸಾಕಷ್ಟು ಗೀತೆಗಳಿವೆ. 1977 ರಲ್ಲಿ ಬಂದು ಹೋದ ಪೂರಬ್ ಔರ್ ಪಚ್ಚಿಮ್ ಚಿತ್ರದಲ್ಲಿ ಒಂದು ಗೀತೆ ಇದೆ. ಇದು ಪ್ರೀತಿಯ ಉತ್ಕಟತೆ ಮತ್ತು ಪ್ರೇಮಿಯ ಅಗಾಧ ಪ್ರೇಮದ ವ್ಯಥೆ ಕಟ್ಟಿಕೊಡುತ್ತದೆ.ಕೇಳಿ.
ಕೋಯಿ ಜಬ್ ತುಮಾರಾ ಹೃದಯ್ ತೋಡದೇ ಹಾಡು ಹೃದ ತಟ್ಟುತ್ತದೆ.!

ಮುಖೇಶ್ ಅಮೇರಿಕಕ್ಕೆ ಹೋಗಿದ್ದರು. ಅಲ್ಲಿ ಕೊಡಬೇಕಿದ್ದು ಲೈವ್ ಕಾನ್ಸರ್​ಗಾಗಿಯೇ ತೆರೆಳಿದ್ದರು.ಆದರೆ, ಮುಖೇಶ್ ಹಾಡಲು ಆಗಲೇ ಇಲ್ಲ. ಎದೆ ನೋವು ಅಂತ ಅಲ್ಲಿಯ ಆಸ್ಪತ್ರೆ ಸೇರಿದ್ದ ಮುಖೇಶ್, ಮರಳಿ ಬಂದದ್ದು ಶವವಾಗಿ. ಆ ದಿನ ಆಗಸ್ಟ್-27. 1976. ಅಂದಿನ ಈ ದಿನಕ್ಕೆ ಈಗ ಲೆಕ್ಕ ಹಾಕಿದರೆ. ಮುಖೇಶರನ್ನ ನಾವೆಲ್ಲ ಅಗಲಿ ಈಗ 39 ವರ್ಷಗಳೇ ಕಳೆದಿವೆ.

ಕಲ್ ಖೇಲ್ ಮೇ ಹಮ್ ಹೋ.. ನಾ ಹೋ ಹಾಡು ಅರ್ಥಗರ್ಭಿತ...!

ಮುಖೇಶ್ ಗಾಯನಕ್ಕೆ ಎಲ್ಲರೂ ತೆಲೆ ದೂಗಿದವರೇ. ಒಮ್ಮೆ ಅವರವರ ಪ್ರೀತಿಯನ್ನ ನೆನೆದು, ಎದೆ ಮುಟ್ಟಿಕೊಂಡವರೇ. ಆದರೆ, ಮುಖೇಶ್ ಕೇವಲ ಸಿನಿರಸಿಕರ ಹೃದಯ ಕದ್ದವರಲ್ಲ. ಸಂಗೀತ ಕ್ಷೇತ್ರದ ಯುವ ಗಾಯಕರು. ಯುವ ಗಾಯಕಿಯರನ್ನೂ ಆವರಿಸಿಕೊಂಡರೋ. ಖ್ಯಾತ ಗಾಯಕಿ ಸಂಗೀತ ಕಟ್ಟಿ, ಮುಖೇಶ್ ಅವರ ಗೀತೆಗಳನ್ನ ಹಾಡಿದವರು. ಅವರ ಪ್ರತಿ ಹುಟ್ಟುಹಬ್ಬ. ಹಾಗೂ ಅಗಲಿದ ದಿನವನ್ನ ನೆನಯುತ್ತಲೇ ಇರ್ತಾರೆ...
ಮುಖೇಶ್ ಸಂಗೀತ ಪ್ರೇಮಿಗಳ, ಸಂಗೀತ ಆರಾಧಕರ ಸ್ಪೂರ್ತಿ. ನೋವಿನ ಭಾವಕ್ಕೆ ಸಂಗೀತದ ಮೂಲಕ ಸ್ಪಂಧಿಸೋದು ಹೇಗೆಂದು ಹೇಳಿಕೊಟ್ಟ ಸಂಗೀತದ ಮೇಷ್ಟ್ರು. ಈ ಮೇಷ್ಟ್ರ ಗಾಯನದಲ್ಲಿ ಎಲ್ಲ ಕೇಳುಗರಿಗೆ ಒಂದು ಆಪ್ತ ಭಾವ ಕಂಡಿತ ಮೂಡುತ್ತದೆ.ಅದು ಮುಖೇಶ್. ಅಗಲಿದ ಗಾಯಕನಿಗೆ ನಮ್ಮ ಈ ಸಂಗೀತ ನಮನ....
-ರೇವನ್

Comments

Submitted by ravindra n angadi Fri, 08/28/2015 - 15:03

ನಮಸ್ಕಾರಗಳು ಸರ್,

ಮುಖೇಶ್ ಅವರ ಹಾಡಿದ ಹಾಡು ತುಂಬಾ ಅರ್ಥಗರ್ಭಿತ, ಮನಮುಟ್ಟುವಂತಹ ಹಾಡು. ಮನಸ್ಸಿಗೆ ನೋವಾದಾಗ ಕೆಲ ಹಾಡುಗಳು ಮನಸ್ಸಿಗೆ ಮುದ ಕೊಡುತಂಹ ಹಾಡು ಹಾಡಿದ ಮುಖೇಶ್ ಅವರಿಗೆ ನಮ್ಮ ನಮನ.

ಧನ್ಯವಾದಗಳು.

Submitted by kavinagaraj Mon, 08/31/2015 - 14:56

ಮುಖೇಶರ ಗಾಯನ ನಮ್ಮನ್ನು ಯಾವುದೋ ಲೋಕಕ್ಕೆ ಕರೆದೊಯ್ಯುತ್ತದೆ. ಗಾಯಕನಿಗೆ ಸುಂದರ ಅಕ್ಷರನಮನಗಳನ್ನು ಸಲ್ಲಿಸಿರುವಿರಿ. ಚೆನ್ನಾಗಿದೆ.