ಹೆಂಡತಿಯರನ್ನು ಕುರಿತ ಜೋಕುಗಳು (ಮಹಿಳೆಯರ ಕ್ಷಮೆ ಕೋರುತ್ತಾ!)

ಹೆಂಡತಿಯರನ್ನು ಕುರಿತ ಜೋಕುಗಳು (ಮಹಿಳೆಯರ ಕ್ಷಮೆ ಕೋರುತ್ತಾ!)

ಬರಹ

ನಾನು ಮತ್ತು ನನ್ನಾಕೆ ಇಪ್ಪತ್ತೈದು ವರ್ಷ ಸುಖವಾಗಿದ್ದೆವು. ಆಮೇಲೆ, ಪರಸ್ಪರ ನೋಡಿ ಮದುವೆಯಾಗಿಬಿಟ್ಟೆವು.
**
ಒಳ್ಳೆಯ ಹೆಂಡತಿ ತಾನು ತಪ್ಪು ಮಾಡಿದ್ದಾಗ ಗಂಡನ ತಪ್ಪುಗಳನ್ನೆಲ್ಲ ಉದಾರವಾಗಿ ಕ್ಷಮಿಸುತ್ತಾಳೆ.
** **
ನನ್ನ ಹೆಂಡತಿಗೆ ಒಂದು ಕಾರು ಕೊಡಿಸಿದೆ. ಆಕೆಯಿಂದ ಫೋನು ಬಂತು.
"ಕಾರಿನ ಎಂಜಿನ್ನಿಳೊಗೆ ನೀರು ಸೇರಿದೆ."
"ಕಾರು ಎಲ್ಲಿದೆ?"
"ಕೆರೆಯೊಳಗೆ ಮುಳುಗಿದೆ."
**
ಸುಖೀ ಮದುವೆಯ ರಹಸ್ಯ ಎಂದೆಂದಿಗೂ ರಹಸ್ಯವಾಗಿಯೇ ಉಳಿದಿರುತ್ತದೆ.
** **
ಜಗಳ ಆಗ ತಾನೇ ಮುಗಿದಿತ್ತು.
"ನಿಮ್ಮನ್ನು ಮದುವೆಯಾದಾಗ ನನ್ನ ಬುದ್ಧಿ ಕತ್ತೆ ಕಾಯುವುದಕ್ಕೆ ಹೋಗಿತ್ತು. ನಾನು ಪೆದ್ದಿ ಆಗಿದ್ದೆ."
"ಹೌದು ಕಣೆ. ಆದರೆ ನಾನು ಆಗ ನಿನ್ನನ್ನು ಪ್ರೀತಿಸುತ್ತಿದ್ದೆ, ನನಗೆ ಗೊತ್ತೇ ಆಗಲಿಲ್ಲ."
**
ನಾನು ಒಂದೂವರೆ ವರ್ಷದಿಂದ ನನ್ನ ಹೆಂಡತಿಯೊಡನೆ ಮಾತನಾಡೇ ಇಲ್ಲ. ಅವಳ ಮಾತಿಗೆ ಅಡ್ಡ ಬರುವುದಕ್ಕೆ ನನಗೆ ಇಷ್ಟವಿಲ್ಲ.
** **
ಗಂಡನ ಕ್ರೆಡಿಟ್ ಕಾರ್ಡು ಕಳೆದುಹೋಗಿತ್ತು. ಆದರೂ ಅವನು ದೂರು ಕೊಡಲಿಲ್ಲ. ಅದನ್ನು ಬಳಸಿ ಅವನ ಹೆಂಡತಿ ಮಾಡುತ್ತಿದ್ದದ್ದಕ್ಕಿಂತ ಕಡಮೆ ಖರ್ಚು ಮಾಡುತ್ತಿದ್ದ ಕಳ್ಳ.
**
ಮದುವೆಯಾಗುವವರೆಗೆ ಗಂಡಸು ಅಪೂರ್ಣ. ಮದುವೆಯಾದಮೇಲೆ ಅವನ ಕತೆ "ಸಂಪೂರ್ಣ."
** **
ಪುಟ್ಟ ಹುಡುಗ ಅಪ್ಪನನ್ನು ಕೇಳಿದ. "ಅಪ್ಪಾ, ಮದುವೆಯಾಗುವುದಕ್ಕೆ ಎಷ್ಟು ಖರ್ಚು ಬರುತ್ತೆ?"
"ಗೊತ್ತಿಲ್ಲ ಮಗೂ. ಮದುವೆ ಆದಂದಿನಿಂದ ತಿಂಗಳು ತಿಂಗಳೂ ದುಡ್ಡು ಕೊಡುತ್ತಲೇ ಇದ್ದೇನೆ, ಇನ್ನೂ ಎಷ್ಟು ಕೊಡಬೇಕೋ ಏನೋ!"
**
ಮಗ: "ಅಪ್ಪಾ, ಆಫ್ರಿಕಾದಲ್ಲಿ ಕೆಲವು ಕಡೆ ಮದುವೆ ಆಗುವವರೆಗೆ ಹೆಂಡತಿ ಯಾರು, ಎಂಥವಳು ಎಂದು ಗೊತ್ತೇ ಇರುವುದಿಲ್ಲವಂತೆ, ಹೌದೆ?"
ಅಪ್ಪ: "ಎಲ್ಲಾ ದೇಶದಲ್ಲೂ ಅದು ಹಾಗೇನೇ ಮಗೂ."
** **
ಗಂಡನೊಬ್ಬ ಹೇಳಿದ್ದು: "ಮದುವೆಯಾಗುವವರೆಗೆ ನಿಜವಾದ ಸಂತೋಷವೆಂದರೆ ಏನೆಂದು ನನಗೆ ಗೊತ್ತೇ ಇರಲಿಲ್ಲ. ಆದರೆ ಅಷ್ಟು ಹೊತ್ತಿಗೆ
ತೀರ ತಡವಾಗಿತ್ತು."
**
ಒಬ್ಬಾತ "ಹೆಂಡತಿ ಬೇಕಾಗಿದ್ದಾಳೆ" ಎಂದು ಪೇಪರಿನಲ್ಲಿ ಜಾಹಿರಾತು ಕೊಟ್ಟ.
ಮಾರನೆಯ ದಿನ ಇನ್ನೂರೈವತ್ತು ಕಾಗದ ಬಂದಿದ್ದವು. ಎಲ್ಲದರಲ್ಲೂ ಒಂದೇ ಸಮಾಚಾರ.
"ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಬಹುದು."
** **
ಹೆಂಗಸೊಬ್ಬಳು ಗೆಳತಿಗೆ ಹೇಳುತ್ತಿದ್ದಳು: "ನನ್ನ ಮದುವೆಯಾದಮೇಲೆ ಗಂಡ ಲಕ್ಷಾಧೀಶ್ವರನಾದ."
ಗೆಳತಿ: "ಹೌದೆ, ಮೊದಲು ಏನಾಗಿದ್ದ?"
ಹೆಂಗಸು: "ಕೋಟ್ಯಧೀಶನಾಗಿದ್ದ."
**
ಮದುವೆ ಎಂಬುದು ಕಲ್ಪನೆಯು ವಿವೇಕದ ಮೇಲೆ ನಡೆಸುವ ದಿಗ್ವಿಜಯ.
ಎರಡನೆಯ ಮದುವೆ ಎಂಬುದು ಆಶಾವಾದವು ಅನುಭವದ ಮೇಲೆ ಸಾಧಿಸುವ ದುರಂತದ ಗೆಲುವು.
** **
ಮದುವೆಯಾದ ಗಂಡಸರು ಮದುವೆಯಾಗದವರಿಗಿಂತ ದೀರ್ಘಕಾಲ ಬದುಕುತ್ತಾರೆ ಅನ್ನುವುದು ಸುಳ್ಳು.
ಮದುವೆಯ ನಂತರದ ಬದುಕು ಕೊನೆಯಿಲ್ಲದ್ದು, ಬಲು ದೀರ್ಘ ಅನ್ನಿಸುತ್ತದೆ ಅಷ್ಟೆ.
**
ಯಶಸ್ವೀ ಗಂಡನೆಂದರೆ ಹೆಂಡತಿ ಖರ್ಚುಮಾಡುವುದಕ್ಕಿಂತ ಹೆಚ್ಚು ಸಂಪಾದಿಸುವವನು.
ಯಶಸ್ವೀ ಹೆಂಡತಿಯೆಂದರೆ ಅಂಥ ಗಂಡನನ್ನು ಹುಡುಕಿ ಪಡೆಯುವವಳು.
** **
ಬಾಟಲಿಯೊಳಗಿದ್ದ ಭೂತ ಗಂಡನೆದುರು ಪ್ರತ್ಯಕ್ಷವಾಗಿತ್ತು. ನೀನು ಕೇಳಿದ್ದೆಲ್ಲ ಕೊಡುವೆ ಎಂದಿತು. ಆದರೆ ಒಂದೇ ಕಂಡೀಷನ್ನು. ನಿನಗೆ ಸಿಕ್ಕಿದ್ದರ ಎರಡರಷ್ಟು
ನಿನ್ನ ಅತ್ತೆಗೆ ದೊರೆಯುತ್ತದೆ ಅಂದಿತು. ಗಂಡ ಬಹಳ ಯೋಚನೆ ಮಾಡಿ ಹೇಳಿದ. ನನಗೆ ಕೋಟಿ ರೂಪಾಯಿ ಕೊಡು, ಆಮೇಲೆ ಅರೆಜೀವವಾಗುವಂತೆ ಚೆನ್ನಾಗಿ ಹೊಡಿ.
**
ಕಿವಿ ಚುಚ್ಚಿಸಿಕೊಂಡ ಗಂಡಸರು ಮದುವೆಗೆ ತಕ್ಕ ರೀತಿಯಲ್ಲಿ ಪ್ರಿಪೇರ್ ಆಗಿರುತ್ತಾರೆ. ಅವರಿಗೆ ನೋವೂ ಗೊತ್ತು, ಕಿವಿಗೆ ಒಡವೆ ಪರ್ಚೇಸ್ ಮಾಡಿಯೂ ಗೊತ್ತು.
** **
ಕೊಂಚ ಯೋಚಿಸಿ ನೋಡಿ. ಮದುವೆ ಎಂಬುದಿರದಿದ್ದರೆ ಗಂಡಸರೆಲ್ಲ ತಾವು ಪರಿಪೂರ್ಣರು ಎಂಬ ಭ್ರಮೆಯಲ್ಲಿರುತ್ತಿದ್ದರು, ಅಲ್ಲವೆ?