ಹೆಂಡತಿಯೂಬ್ಬಳು
ಹೆಂಡತಿಯೂಬ್ಬಳು
ಹೆಂಡತಿಯೊಬ್ಬಳು ಮನೆಯೂಳಗಿದ್ದರೆ
ನಾನಾಗ ಸೋತ ಸಿಪಾಯಿ, ನಾನಾಗ ಬಡಪಾಯಿ,
ಹೆಂಡತಿ ಮನಿಯೊಳಗಿರದಿದ್ದರೆ,
ನಾನೆ ಮನೆಯ ರೊವಾರಿ, ಆಗ ನಾ ಸೋಮಾರಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಸುಂದರ ರಾತ್ರಿ , ಅದು ನನ್ನ ಭ್ರಾಂತಿ
ಹೆಂದತಿಯೊಬ್ಬಳು ಮನೆಯಲಿಲ್ಲದಿದ್ದರೆ
ನನದೇ ಗುಂಡಿನ ರಾತ್ರಿ, ನನಗದೆ ತುಂಬಾ ಸ್ಪೂರ್ತಿ.
ಹೆಂಡತಿಯೊಬ್ಬಳು ಮನೆಯೂಳಗಿದ್ದರೆ
ಕಂಡದೆಲ್ಲಾ ಬೇಕ್ರಿ, ನೋಡಿದೆಲ್ಲ ತರ್ರಿ
ಹೆಂಡತಿ ಮನಿಯೂಳಗಿರದಿದ್ದರೆ
ನನಗದೇನು ಬೇಕ್ರಿ, ಏನೇನಿದೋ ಅದೇ ಸಾಕ್ರಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ,
ನನಗದೆ ದೊಡ್ಡ ರಗಳಿ, ಬರುವಾಗ ತರಲ್ಲಿಲ್ಲ ಬಳುವಳಿ
ಹೆಂಡತಿ ಮನೆಯೊಳಗಿರದಿದ್ದರೆ
ನನಗದೇನು ಗತ್ತು, ಇದು ಅವಳಿಗೇನು ಗೊತ್ತು.
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ,
ಕೊಟ್ಟಾಳು ಅವಳಿ ಜವಳಿ, ತರಬೇಕ್ರಿ ರವಕಿ, ಜವಳಿ
ಹೆಂಡತಿಯೊಬ್ಬಳು ಮನೆಯಲ್ಲಿಲ್ಲದಿದ್ದರೆ
ಅದೇನು ಕಸ ಮುಸುರಿ, ನನಗೆ ಸಾಕು ಸಾಕಾತ್ರಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಅದೇ ಕ್ಷೇಮ ಧರಿತ್ರಿ, ನನಗೀಗ ಗೊತ್ತಾತ್ರಿ
ಹೆಂಡತಿಯೂಬ್ಬಳು ಮನೆಯಲಿಲ್ಲದಿದ್ದರೆ
ಮಕ್ಕಳದೇ ಜಾತ್ರಿ, ತಲೆಯದು ಒಡೆದೋತ್ರಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗಾಗ ಜೀವ ಬಂದಂಗಾತ್ರಿ, ಅದೇ ಸುಲಭ ಐತ್ರಿ.
-ಮಧ್ವೇಶ್.
Comments
ಉ: ಹೆಂಡತಿಯೂಬ್ಬಳು
In reply to ಉ: ಹೆಂಡತಿಯೂಬ್ಬಳು by gopaljsr
ಉ: ಹೆಂಡತಿಯೂಬ್ಬಳು
ಉ: ಹೆಂಡತಿಯೂಬ್ಬಳು
In reply to ಉ: ಹೆಂಡತಿಯೂಬ್ಬಳು by partha1059
ಉ: ಹೆಂಡತಿಯೂಬ್ಬಳು
ಉ: ಹೆಂಡತಿಯೂಬ್ಬಳು
ಉ: ಹೆಂಡತಿಯೂಬ್ಬಳು
In reply to ಉ: ಹೆಂಡತಿಯೂಬ್ಬಳು by siddhkirti
ಉ: ಹೆಂಡತಿಯೂಬ್ಬಳು