ಹೆಕ್ಕಿ ತಂದ ಹನಿ ಮುತ್ತುಗಳು

ಹೆಕ್ಕಿ ತಂದ ಹನಿ ಮುತ್ತುಗಳು

ಕವನ

ಎಲ್ಲಿ ಹೋದವು

ನಮ್ಮ ಬಾಲ್ಯದ ಆಟಗಳು?

ಕುಂಟಾ ಬಿಲ್ಲೆ

ಮರಕೋತಿ ಆಟ

ಬುಗರಿ, ಗಾಳಿಪಟ,

ಕಣ್ಣಾ ಮುಚ್ಚಾಲೆ 

ಲಗೋರಿ, ಚಿನ್ನಿದಾಂಡು

ಕಳ್ಳ-ಪೋಲೀಸ್

ಚೌಕಬಾರ... ಎಂಥ ಸೊಗಸು!!

ಈಗೇನಿದ್ದರೂ ಬರೀ 

ಮೊಬೈಲ್..ಮೊಬೈಲ್

ಮೊಬೈಲ್!!!

***

ನಾನಂತೂ

ನೀನು ಅದೆಷ್ಟೇ

ಬಾರಿ

ನನ್ನನ್ನು 

ಅನ್ ಫ್ರೆಂಡ್

ಮಾಡಿದರೂ

ನಾನಂತೂ

ನಿನ್ನ

ಇನ್ ಫ್ರೆಂಡ್ ಆಗಿ

ನಿನ್ನ ಹಾರ್ಟ್ ಲ್ಲೇ

ಬೆಚ್ಚಗಿರುತ್ತೇನೆ!

-ಪರಮೇಶ್ವರಪ್ಪ ಕುದರಿ

***

ಗಾಳಿ 

           ಮತ್ತು

                   ಯುದ್ಧ

                         ಯಾವುದೇ

                               ಕ್ಷಣದಲ್ಲೂ....

                                      ಬದಲಾಗಬಹುದು.

 

                            ಹಾಗೆಯೇ....

                ಮನಸ್ಸೂ

            ಮತ್ತು

   ಕ್ಷಣಗಳು....

        ಕೂಡ....

 

- ವಿಜಯಾ ಶೆಟ್ಟಿ.ಸಾಲೆತ್ತೂರು

***

*ಹವಳದ ತುಟಿ

ಹೊಳೆಯುತಿದೆ

ಆ ನಿನ್ನ ...

ಹವಳದ ತುಟಿ..!

ಶಶಿ ಬೆಳಕೆ

ಮಬ್ಬಾಗಿದೆ...

ನಿನಗಾರು ಸಾಟಿ...?!

-*ಜನಾರ್ದನ ದುರ್ಗ*

 

ಚಿತ್ರ್