ಹೆಚ್ಚು ಕಡಿಮೆಯಾದರೆ...
ಕವನ
ಅತ್ತ ಇತ್ತ ನೋಡಿ ಮಗುವೆ
ರಸ್ತೆ ದಾಟಬೇಕು
ಹೆಚ್ಚು ಕಡಿಮೆಯಾದರೆ
ಯಮನ ನೋಡಬೇಕು
ಹಿರಿಯರಂದ ಮಾತ ಕೇಳಿ
ಬದುಕಿ ಬಾಳಬೇಕು
ಓದು ಬರಹ ಕಲಿತು ಸಾಗಿ
ವಿದ್ಯೆ ಪಡೆಯಬೇಕು
ಹಿಡಿದ ಕೆಲಸ ಮಾಡಿ ಮುಂದೆ
ಹೆಸರು ಗಳಿಸಬೇಕು
ಮಾತಿನೊಳಗೆ ಸತ್ಯವಿರಲಿ
ಸುಖವ ಕಾಣಬೇಕು
ಹಿರಿಯರಿಗೇ ವಂದಿಸುತ
ಜಾಣ ಎನಿಸಬೇಕು
ತಿಳಿದವರ ನುಡಿಯನಿಂದು
ಕಲಿತು ನಡೆಯಬೇಕು
ಎಲ್ಲರೊಂದೆ ಎನುವ ಮನದಿ
ಬೆರೆತು ಹಾಡಬೇಕು
ಕಷ್ಟ ಪಡುವ ಜನರ ನೋಡಿ
ಕೈಯ ಹಿಡಿಯಬೇಕು
ಭಾಷೆ ವೇಷದೊಳಗೆ ದ್ವೇಷ
ಮರೆತು ಸಾಗಬೇಕು
ಕಾಯಕವನು ಮಾಡುತಲೆ
ಮುಕ್ತಿ ಹೊಂದಬೇಕು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್