ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ

ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ

ಬರಹ

ಎಸ್ ಸುರೇಂದ್ರನಾಥರ ಕಾದಂಬರಿ ಎನ್ನ ಭವದ ಕೇಡು ಇಷ್ಟವಾಗುವುದು ಅದು ಒಂದು ಇಡೀ ಆಕೃತಿಯಾಗಿ ನಮ್ಮ ಎದೆಯಲ್ಲಿ ಹುಟ್ಟಿಸುವ ತಲ್ಲಣಗಳಿಗಾಗಿ ಮತ್ತು ಇಡೀ ಕಾದಂಬರಿಯ ಉದ್ದಕ್ಕೂ ಕಥಾನಕ ಸಾಗುವ ಒಂದು ಅನೂಹ್ಯ ವಿಧಾನಕ್ಕಾಗಿ. ಕಾದಂಬರಿ ಪ್ರಕಾರದ ಬರವಣಿಗೆ ಸಾಧಾರಣವಾಗಿ ಒಂದು ಬದುಕಿನ, ಇಡೀ ಜೀವನದ ಹೋರಾಟದ ಪರಿಪೂರ್ಣ ಅನುಭವವನ್ನು ಕಟ್ಟಿಕೊಡುವ ಸಂದರ್ಭದಲ್ಲಿ ಒಂದು ವಾತಾವರಣವನ್ನು, ಜೀವಂತವೆನಿಸುವ ಪಾತ್ರಗಳನ್ನು ಅಚ್ಚಳಿಯದಂತೆ ಮನಸ್ಸಿನಲ್ಲಿ ಕಡೆದು ನಿಲ್ಲಿಸುತ್ತದೆ. ಅದೊಂದು ಬೇರೆಯೇ ಆದ ಲೋಕ, ಬರಹಗಾರನಿಗೂ ಓದುಗನಿಗೂ. ಅಲ್ಲಿ ಆ ಲೋಕದಲ್ಲಿ ಇರುವವರೆಗೆ ಮಾತ್ರ ನಿಜವಾದ ಅನೇಕ ಘಟನೆಗಳನ್ನು, ತಿರುವುಗಳನ್ನು, ಏಳು ಬೀಳುಗಳನ್ನು ಎಷ್ಟರಮಟ್ಟಿಗೆ ಓದುಗ ಒಪ್ಪಿಕೊಳ್ಳುತ್ತಾನೆ ಎನ್ನುವುದರ ಮೇಲೆ ಆತ ಆ ಲೋಕದಿಂದ ಹೊರಬಂದ ಮೇಲೆ ಆ ಓದು ತನಗೆ ಏನನ್ನುಂಟು ಮಾಡಿತು ಎನ್ನುವುದನ್ನು ಕಾಣಬಲ್ಲ.

ಛಂದ ಪುಸ್ತಕ, ಐ-೦೦4, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು - 76. ಸೆಲ್: 9844422782, chandapustaka@yahoo.com

ಪುಟಗಳು 236, ಬೆಲೆ: ಎಪ್ಪತ್ತೈದು ರೂಪಾಯಿ.