ಹೆಣ್ಣು ಸವಿಯುವ ಹಣ್ಣೋ?........ ಬಾಳಿನ ಕಣ್ಣೋ?

ಹೆಣ್ಣು ಸವಿಯುವ ಹಣ್ಣೋ?........ ಬಾಳಿನ ಕಣ್ಣೋ?

ಕವನ

 

ಕಾಮನಾ ಬಿಲ್ಲನ್ನು ಮೀರಿಸುವ ಹುಬ್ಬು
ಹವಳದಾ ಕಾಂತಿಯೊಲು ಅಧರಗಳ ಮೆರಗು
ಅವಳಾಟ ಕುಡಿನೋಟ ನಡೆಮಾಟ ಮನದೋಟ
ಬವಣೆ ಪಡುವರು ಕವಿಗಳೇತಕಿವ ಬರೆದು
ಹೆಣ್ಣು ಚಂಚಲೆಯೆಂದು ಕಡೆಗಣಿಸಿ ಬಿಡುವಾಗ
ಮಣ್ಣುಗೂಡಿಸಲೇಕೆ ಸ್ವಾಭಿಮಾನವನು
ಮೃದುಬಾಲೆ ಚದುರೆ ಮನಮಧುರೆ ಮೋಹಿನಿಯೆಂದು
ಬಣ್ಣಿಸಲು ಲೇಖನಿಯ ಬಳಸುವರದೇಕೆ
ಸಹನೆ ಶಾಂತಿಯ ಮೂಲ ಕ್ಷಮಯಾ ಧರಿತ್ರೀ
ಅಹಮಿಕೆಯ ತೇಪೆ ಹಚ್ಚುವಿರೇಕೆ ಮತ್ತೆ
ಪುಸ್ತಕದಿ ಮಸ್ತಕದಿ ವ್ಯಸ್ತವಾಗಿಹ ಛವಿಯ 
ನಿರಸ್ತಗೊಳಿಸದೆ ಉಳಿಸಿ ಸ್ವಾಭಿಮಾನವನು
ಸೌಂದರ್ಯದರಗಿಣಿಯ ಆತ್ಮಾಭಿಮಾನವನು 
ಸಂಗಿಣಿಯ ಮೌಲ್ಯವನು ಪರಿಗಣಿಸಿರಿ
ರಾಗಿಣಿಯ ರಾಗಕ್ಕೆ ಶೃತಿ ಸೇರಿಸಿದರಾತ
ರಂಗಿಣಿಯು ಒಲಿಯುವಳು
ಬಾಳು ಹಸನಾಗುವುದು 
ದೈವಕೃಪೆ ಒದಗಿ

 

ಕಾಮನಾ ಬಿಲ್ಲನ್ನು ಮೀರಿಸುವ ಹುಬ್ಬು

ಹವಳದಾ ಕಾಂತಿಯೊಲು ಅಧರಗಳ ಮೆರಗು

ಅವಳಾಟ ಕುಡಿನೋಟ ನಡೆಮಾಟ ಮನದೋಟ

ಬವಣೆ ಪಡುವರು ಕವಿಗಳೇತಕಿವ ಬರೆದು


ಹೆಣ್ಣು ಚಂಚಲೆಯೆಂದು ಕಡೆಗಣಿಸಿ ಬಿಡುವಾಗ

ಮಣ್ಣುಗೂಡಿಸಲೇಕೆ ಸ್ವಾಭಿಮಾನವನು

ಮೃದುಬಾಲೆ ಚದುರೆ ಮನಮಧುರೆ ಮೋಹಿನಿಯೆಂದು

ಬಣ್ಣಿಸಲು ಲೇಖನಿಯ ಬಳಸುವರದೇಕೆ


ಸಹನೆ ಶಾಂತಿಯ ಮೂಲ ಕ್ಷಮಯಾ ಧರಿತ್ರೀ

ಅಹಮಿಕೆಯ ತೇಪೆ ಹಚ್ಚುವಿರೇಕೆ ಮತ್ತೆ

ಪುಸ್ತಕದಿ ಮಸ್ತಕದಿ ವ್ಯಸ್ತವಾಗಿಹ ಛವಿಯ 

ನಿರಸ್ತಗೊಳಿಸದೆ ಉಳಿಸಿ ಸ್ವಾಭಿಮಾನವನು


ಸೌಂದರ್ಯದರಗಿಣಿಯ ಆತ್ಮಾಭಿಮಾನವನು 

ಸಂಗಿಣಿಯ ಮೌಲ್ಯವನು ಪರಿಗಣಿಸಿರಿ

ರಾಗಿಣಿಯ ರಾಗಕ್ಕೆ ಶೃತಿ ಸೇರಿಸಿದರಾ

ತರಂಗಿಣಿಯು ಒಲಿಯುವಳು

ಬಾಳು ಹಸನಾಗುವುದು ದೈವಕೃಪೆ ಒದಗಿ

Comments