ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ
ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ
ಪಾಲಕರು ಮಗಳನ್ನು ಪ್ರೀತಿಯಿಂದ ಲಾಲಿಸಿ, ಪಾಲಿಸಿ, ಕಲಿಸಿ "ವರದಕ್ಷಿಣೆ" ಎನ್ನುವ ಒಂದು ಚಿಕ್ಕ ಖಜಾನೆಯೊಂದಿಗೆ ವರನೊಬ್ಬನಿಗೆ ಧಾರೆಯೆರೆದುಕೊಟ್ಟು ಜವಾಬ್ದಾರಿ ಕಳದುಕೊಂಡೆ ಎಂದು ನಿಟ್ಟುಸಿರು ಬಿಡುತ್ತಾರೆ. ಮುಂದೆ.....?
ನಾವು ಒಂದು ವಾಹನ ತೆಗೆದುಕೊಂಡರೂ, ಅದರ ಸುರಕ್ಷೆಗಾಗಿ ವಿಮೆ (ಇನ್ಷುರೆನ್ಸ್) ಮಾಡಿಸುತ್ತೇವೆ. ಹಾಗೆಯೇ ಯಾವುದೇ ಒಂದು ಹೊಸ ಹೆಜ್ಜೆ ಇಡಬೇಕೆಂದರೂ 10 ಬಾರಿ ಯೋಚಿಸಿ ಸುರಕ್ಷಿತವಾದ ಮಾರ್ಗದಲ್ಲಿ ನಡೆಯುತ್ತೇವೆ. ಈ ಯೋಚನೆ ಮಗಳನ್ನು ಧಾರೆ ನೀಡುವಾಗ ನಮಗೆ ಬರುವುದೇ ಇಲ್ಲ. ಒಳ್ಳೆಯ ಮನೆ, ಒಳ್ಳೆಯ ಕೆಲಸ, ಒಳ್ಳೆಯ ಹುಡುಗ ಎಂದೇನೋ ವಿಚಾರಿಸುತ್ತೇವೆ. ಆದರೆ ಈಗಿರುವ ದಿನಗಳು ಮುಂದೆಯೂ ಇರುತ್ತವೆ, ಈಗಿರುವ ಒಳ್ಳೆಯತನ ಮುಂದೆಯೂ ಇರುತ್ತವೆ ಎನ್ನುವ "ನಂಬಿಕೆ" ನಮ್ಮೆಲ್ಲಾ ಋಣಾತ್ಮಕ ಭಾವನೆಗಳಿಗೆ ಪೂರ್ಣವಿರಾಮ ಹಾಕುತ್ತದೆ. ನಮ್ಮ ವಾಹನ ಮುಂದೆ ಅಪಘಾತಕ್ಕೆ ಈಡಾಗಬಹುದು, ಕಳೆದುಹೋಗಬಹುದು ಎಂದೆಲ್ಲಾ ಯೋಚಿಸಿ ಮುಂಜಾಗ್ರತೆಯಿಂದ ನಷ್ಟ ಪರಿಹಾರಕ್ಕಾಗಿ ವಿಮೆ (ಇನ್ಷುರೆನ್ಸ್) ಮಾಡಿಸುತ್ತೇವೆ, ಒಂದು ಯಂತ್ರದ ಬಗ್ಗೆ ಯೋಚಿಸುತ್ತೇವೆ ಎಂದಾದರೆ, ಒಂದು ಜೀವದ ಬಗ್ಗೆ ಯಾಕೆ ಯೋಚಿಸಬಾರದು ?
ಮದುವೆಯಾದ ಹುಡುಗಿ ತನ್ನ ಗಂಡನೊಂದಿಗೆ ಸಂಸಾರ ಮಾಡುತ್ತಾ ತಾನು ಕಟ್ಟಿದ ಕನಸು "ಕನಸಾದರೂ-ನನಸಾದರೂ" ಒಂದೇ ರೀತಿಯಲ್ಲಿ ಸಂಸಾರ-ಮಕ್ಕಳು ಎಂದು ಲೋಕವನ್ನೇ ಮರತಿರುವಂತಹ ಸಂದರ್ಭದಲ್ಲಿ, ಧುತ್ತೆಂದು ಗಂಡನೊಡನೆ ಮನಸ್ತಾಪ ಬಂದು ಸಂಬಂಧವನ್ನೇ ಕಳದುಕೊಳ್ಳುವ ಪರಿಸ್ಥಿತಿ ಬಂದರೆ-ಅಂದರೆ ಗಂಡ ಕುಡಿತಕ್ಕೆ ಬಲಿಯಾಗಿರುವುದೋ, ದುಶ್ಚಟಗಳಿಗೆ ಬಲಿಯಾಗಿ ಹಣ ವ್ಯಯ ಮಾಡುತ್ತಿರುವುದೋ, ಬೇರೊಂದು ಹುಡುಗಿಯನ್ನು ಮದುವೆಯಾಗಿರುವುದೋ ...... ಅವಳಿಗೆ ತನ್ನ ಗಂಡ ಸುಧಾರಿಸುವ, ತಾನು ಹೊಂದಿಕೊಳ್ಳುವ ಮಟ್ಟವನ್ನು ಮೀರಿದ್ದೇವೆ ಎಂದೆನಿಸತೊಡಗಿದಾಗ (ಈಗಿನ ದಿನಗಳಲ್ಲಿ ಇದು ಸಾಮಾನ್ಯವಾಗಿದೆ) ಅವಳು ಎದುರಿಸುವ ಕಷ್ಟ ಸಂಕಟ ನೋವುಗಳಿಗೆ ಮಿತಿಯೇ ಇರುವುದಿಲ. ಇಂತಹ ಘಟ್ಟದಲ್ಲಿ ಹೆಣ್ಣು ನಿಂತಿರುವಾಗ ಅವಳ ಸಂಸಾರ - ಅವಳ ಕರ್ಮ ಎಂದು ತವರು ಮನೆಯವರೂ-ಅತ್ತೆ ಮನೆಯವರೂ ಕೈ ಬಿಡುವುದೇ ಹೆಚ್ಚು.
ಇಂತಹ ಅಘಟಿತ ಸಮಸ್ಯೆಗಳನ್ನು ಮುಂಚೆಯೇ ಯೋಚಿಸಿ ಮದುವೆಯ ಸಂದರ್ಭದಲ್ಲಿ ನಾವು ಕೊಟ್ಟ ಖಜಾನೆ ಅವಳ ಕಷ್ಟಗಳಿಗೇ ಮೀಸಲಿಡಬೇಕು, ನೀವೂ ಪ್ರತಿ ತಿಂಗಳೂ ಇಂತಿಷ್ಟು ಅಂತ ಅವಳ ಹೆಸರಲ್ಲಿ ಹಣ ಉಳಿಸಿಡಲೇಬೇಕು ಅಂತ ಹೆಣ್ಣೆತ್ತವರು ನಿಯಮ ಹಾಕುವುದು ಒಳ್ಳೆಯದಲ್ಲವೇ? ಇದು ಯಾವುದೇ ಕಾನೂನುಬದ್ಧ ನಿಯಮವಲ್ಲದಿದ್ದರೂ ಧರ್ಮ-ಅಂತ:ಕರಣ-ಮುಂಜಾಗ್ರತಾ ನಿಯಮವಾಗಿ ರೂಢಿಸಿಕೊಳ್ಳಬಹುದಲ್ಲವೇ ? ಅವಳಿಗೆ ಯಾವುದೇ ಸಮಸ್ಯೆ ಬರದೇ ಸುಖವಾಗಿದ್ದರೂ ಆ ಹಣ ಒಂದು ಉಳಿತಾಯವಾಗಿರುತ್ತದೆ. ಅವಳಿಗೆ ಸಂಕಷ್ಟಗಳಿಗೆ ಸಿಲುಕಿ ಸಮಸ್ಯೆಗಳನ್ನು ಎದುರಿಸುತ್ತಿರುವಾಗಲೂ, ಎಲ್ಲಾ ಸಂಬಂಧಗಳನ್ನು ಕಡಿದುಕೊಂಡ ವಿಷಘಳಿಗೆಯಲ್ಲೂ ಈ ಹಣ "ಆಪತ್ಧನ" ವಾಗಿ "ಮುಳುಗುವವಳಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಂತಾಗುವುದಿಲ್ಲವೇ?
ತರಂಗ ವಾರ ಪತ್ರಿಕ-11.08.2011ರ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನವನ್ನು ಸಂಪದಿಗರ ಪ್ರತಿಕ್ರಿಯೆಗೆ ಪ್ರಕಟಿಸುತ್ತಿರುವೆ.
Comments
ಉ: ಹೆಣ್ನೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ
In reply to ಉ: ಹೆಣ್ನೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ by venkatb83
ಉ: ಹೆಣ್ನೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ
ಉ: ಹೆಣ್ನೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ
In reply to ಉ: ಹೆಣ್ನೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ by makara
ಉ: ಹೆಣ್ನೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ
ಉ: ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ
In reply to ಉ: ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ by VeerendraC
ಉ: ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ
In reply to ಉ: ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ by suma kulkarni
ಉ: ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ
ಉ: ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ
In reply to ಉ: ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ by tthimmappa
ಉ: ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ