ಹೆಸರು ಬೇಳೆ ಪಾಯಸ
ಹೆಸರು ಬೇಳೆ - ೨ ಕಪ್, ಬೆಲ್ಲದ ಹುಡಿ ೪ ಕಪ್, ತೆಂಗಿನ ಕಾಯಿ ತುರಿ (ಎಸಳು) ಯ ಹಾಲು ೨ ಕಪ್, ತುಪ್ಪ, ಗೋಡಂಬಿ, ಒಣ ದ್ರಾಕ್ಷೆ, ಚಿಟಿಕೆ ಉಪ್ಪು.
ಹೆಸರು ಬೇಳೆಯನ್ನು ಚೆನ್ನಾಗಿ ಸ್ವಚ್ಛ ಗೊಳಿಸಿ, ಹದ ಉರಿಯಲ್ಲಿ ಹುರಿಯಬೇಕು. ನೀರನ್ನು ಕುದಿಯಲಿಟ್ಟು ಕುದಿಯಲು ಆರಂಭಿಸಿದಾಗ ಬೇಳೆಯನ್ನು ನೀರಿನಲ್ಲಿ ತೊಳೆದು ಹಾಕಬೇಕು. ಹಾಗೆಯೇ ಬೇಯಿಸಬ಼ಹುದು.(ಕುಕ್ಕರ್ ನಲ್ಲಿ ಸಹ ಬೇಯಿಸಬಹುದು, ಎರಡು ವಿಸಿಲ್ ಆಗುವಾಗ ಕೆಳಗಿಳಿಸಬೇಕು.) ಬೆಂದಾಗ ಬೆಲ್ಲದ ಹುಡಿ ಸೇರಿಸಬೇಕು. ತೆಂಗಿನಕಾಯಿ ಎಸಳಿನ ಹಾಲು ಹಿಂಡಿ ತೆಗೆದಿಡಬೇಕು. ಎರಡನೇ ಸಲ ಹಿಂಡಿದ ಕಾಯಿ ಹಾಲು ಸೇರಿಸಿ, ಚಿಟಿಕೆ ಉಪ್ಪು ಹಾಕಬೇಕು. ಎಲ್ಲಾ ಮಿಶ್ರಣ ಆದ ಮೇಲೆ, ಒಂದನೇ ಹಾಲು ಹಿಂಡಿ ಇಟ್ಟದ್ದನ್ನು ಸೇರಿಸಿ, ಗೋಡಂಬಿ, ಒಣದ್ರಾಕ್ಷಿ ತುಪ್ಪದಲ್ಲಿ ಹುರಿದು ಹಾಕಿ ಮುಚ್ಚಿಡಬೇಕು. ಹೆಚ್ಚಿನವರು ಈ ಪಾಯಸಕ್ಕೆ ಏಲಕ್ಕಿ ಹಾಕುವುದಿಲ್ಲ. ಬೇಕಾದವರು ಏಲಕ್ಕಿ ಹಾಕಬಹುದು. ಹೆಸರುಬೇಳೆ ಪಾಯಸಕ್ಕೆ ಬೆಲ್ಲ ಜಾಸ್ತಿ ಬೇಕಾಗುತ್ತದೆ. ರುಚಿಯಾದ ಪಾಯಸ ತುಂಬಾ ರುಚಿ.
-ರತ್ನಾ ಕೆ.ಭಟ್, ತಲಂಜೇರಿ