ಹೆಸರು ಹೇಳಬೇಕೆ ? ಮತ್ತು ಇತರೆ ಗಝಲ್ ಗಳು

ಹೆಸರು ಹೇಳಬೇಕೆ ? ಮತ್ತು ಇತರೆ ಗಝಲ್ ಗಳು

ಕವನ

ಹೆಸರು ಹೇಳಬೇಕೆ ಚೆಲುವೆ

ಒಲವೆಂದರೆ ಸಾಲದೆ

ಖುಷಿಯೆಡೆಯಲಿ ಸವಿ ಕಾಣದೆ

ಹೋದೆಯೆಲ್ಲೆ  ಕೋಮಲೆ

 

ಮೌನದೊಳಗೆ ಪ್ರೀತಿಯೋಲೆ

ಮೂಕವಾಗಿ ಕರಗಿತೆ

ಚಿಂತೆ ತಾಳ ಹಾಕಲಾಗ

ಶಾಂತಿ ದೂರವಾಯಿತೆ

 

ಹಣದ ಮೋಹ ಬೇಡವೆಂದು

ಬಡಿದುಕೊಂಡೆ ನನ್ನನಂದು

ಕೊನೆಗು ತಾಳ ತಪ್ಪಿಹೋಗಿ

ಮೋಹ ಕಳಚಿ ನಿಂದೆನು

 

ಸುಡುವ ಬೆಂಕಿ ಸುಡಲುಯಿಂದು

ಮನದ  ಬಯಕೆ ಕಮರುತ

ಹುಟ್ಟು ಸಾವ ನಡುವೆಯೆಲ್ಲ

ಬಾಳ ಪಯಣ ಸೊರಗುತ

***

ಗಝಲ್

ನಾನು ನಾಳೆಯ ದಿನ ಎಲೆಯೊಣಗಿದ ಮೇಲೆ ಅದರೊಳಗಿಂದ ಉದುರುವೆ ಏಳು ಗೆಳತಿ

ನೀನು ಯಾವತ್ತಿಗೂ ಸಿಂಗಾರದ ಸಿಂಗರದಂತೆ ಮನೆಯೊಳಗಿಂದ ಕಾದಿರುವೆ ಬಾಳು ಗೆಳತಿ

 

ನನ್ನೊಳಗಿನ ನನ್ನಂತೆ ಬದುಕುವ ನನ್ನಲ್ಲಿ ಏನಿದೆಯೆಂದು ಕೈಹಿಡಿದು ಬಂದೆಯೋ ನಾನರಿಯೆ

ನಿನ್ನೊಳಗಿನ ನಿನ್ನಂತೆ ಬದುಕುವ ಬದುಕಲ್ಲಿ  ಮುತ್ತುಗದ ಮಂದಾರ ಸವಿಯಾಗಿರುವೆ ಹೇಳು ಗೆಳತಿ

 

ನನ್ನೂರಿನ ಕಡಲಿನ ತೀರದಲ್ಲಿ ಅಲೆಮಾರಿಯಂತೆ ಸಂಚರಿಸುತ್ತಿರುವೆ ಗೊತ್ತು ಗುರಿಯಿಲ್ಲದಂತೆ

ನಿನ್ನೂರಿನ ವನಝರಿಗಳ ನಡುವೆ ಮನಕ್ಕೊಪ್ಪವ ರೀತಿಯೇ ಮೀಯುತ್ತಿರುವೆ ಊಳು ಗೆಳತಿ

 

ನನ್ನವನೊಳಗಿನ ನೋವುಗಳೆಲ್ಲ ತೀರದ ಬಯಕೆಯೊಳಗಿಂದ ಚೆಲ್ಲಿದವುಗಳೆಂದು ಹೇಳುತ್ತಿರುವೆಯಂತೆ

ನೀನಾದರೂ ಬಕುತಿಯ ತೋರ್ಪಡಿಕೆಯಲ್ಲಿ ಸಾಗದೆ ಹುಸಿ ರಾಗವನು ಮರೆಯುತ್ತಿರುವೆ ಕೇಳು ಗೆಳತಿ

 

ನಾನಿಲ್ಲದೆಯೇ ಈಶನ ಜೊತೆಯೇ ಇನ್ನುಳಿದ ದಾರಿಯ ಸವೆಸಬಹುದೆಂದಿದ್ದರೆ ನನ್ನಡ್ಡಿಯಿಲ್ಲವಂತೆ

ನೀನಿಲ್ಲದೆಯೇ ವರ್ಣನೆಯ ಮಾತುಗಳು ಬರಬಹುದೆಂದರೂ ನಿನಗಾಗಿಯೇ ಕಾಯುತ್ತಿರುವೆ ತಾಳು ಗೆಳತಿ

***

ಗಝಲ್

ಬದುಕಿನಲ್ಲಿ ತ್ರಾಣವಿದ್ದರೂ ಬತ್ತಿದ್ದ ಮೌನಿಗರ ಕಾಲು ಹಿಡಿದು ಬೇಡುತ್ತೇವೆ

ಚೇತನದಲ್ಲಿ ಬಲವಿದ್ದರೂ ಹೊತ್ತಿದ್ದ ಮಣ್ಣಿಗರ ಕಾಲು ಹಿಡಿದು ಬೇಡುತ್ತೇವೆ 

 

ಅಪಾಯದಲ್ಲಿ ಉಪಾಯವಿದ್ದರೂ ಸೋತಿದ್ದ  ಉಳ್ಳವರ ಕಾಲು ಹಿಡಿದು ಬೇಡುತ್ತೇವೆ

ವಂತಿಗೆಯಲ್ಲಿ ಕಷ್ಟವಿದ್ದರೂ ಕಂತಿದ್ದ ಮುಖದವರ ಕಾಲು ಹಿಡಿದು ಬೇಡುತ್ತೇವೆ

 

ನಿತ್ರಾಣದಲ್ಲಿ ಗೊಂದಲವಿದ್ದರೂ ಕಾಡಿದ್ದ ಯವನಿಗರ ಕಾಲು ಹಿಡಿದು ಬೇಡುತ್ತೇವೆ 

ನಿರ್ಬಲದಲ್ಲಿ ಸಫಲತೆಯಿದ್ದರೂ ಹಾಡಿದ್ದ ಜವನಿಗರ ಕಾಲು ಹಿಡಿದು ಬೇಡುತ್ತೇವೆ

 

ಚಿಂತೆಯಲ್ಲಿ ಚೆಲುವಿದ್ದರೂ ಸಾಗಿದ್ದ ಜೋಡಿಗರ ಕಾಲು ಹಿಡಿದು ಬೇಡುತ್ತೇವೆ

ಚಿಂತನೆಯಲ್ಲಿ ಪ್ರಕಾಶವಿದ್ದರೂ ತಂಪಿದ್ದ ಜೊತೆಯವರ ಕಾಲು ಹಿಡಿದು ಬೇಡುತ್ತೇವೆ

 

ಹೊಂಬೆಳಕಲ್ಲಿ ಈಶನಿದ್ದರೂ ಗೊಂತಿದ್ದ ಪಯಣಿಗರ ಕಾಲು ಹಿಡಿದು ಬೇಡುತ್ತೇವೆ

ಒಲುಮೆಯಲ್ಲಿ ಪ್ರಣಯವಿದ್ದರೂ ನಿಂತಿದ್ದ ಚೆಲುವೆಯರ ಕಾಲು ಹಿಡಿದು ಬೇಡುತ್ತೇವೆ

 

-ಹಾ ಮ ಸತೀಶ

 

ಚಿತ್ರ್