ಹೆಸರು ಹೇಳಿ ಹೋಗು ಒಮ್ಮೆ...
ಬರಹ
ಎದುರಾದೆ ನೀ ಮುಂಜಾವಿನಲ್ಲಿ...
ಕುಡಿನೋಟವ ಬೀರುತ ಕಣ್ಣಂಚಿನಲಿ...
ಮರುಳಾದೆ ನಾ ನಿನ್ನ ಸೌಂದರ್ಯಕೆ...
ತಿಳಿಯದಾಗಿದೆ ಯಾವುದಕ್ಕೆ ಮಾಡಲಿ ನಾ ನಿನ್ನ ಹೋಲಿಕೆ...
ಉದಯಿಸುತ್ತಿದ್ದ ರವಿಯು ನಿನ್ನ ರೂಪವ ಕಂಡು ಬೆರಗಾಗಿ
ಅಡಗಿ ಕುಳಿತ ಮೋಡದ ಮರೆಯಾಗಿ...
ಮನವು ತುಡಿಯುತ್ತಿತ್ತು ನಿನ್ನ ಸನಿಹಕೆ...
ನೋಡಿಯೂ ನೋಡದೆ ಹೋಗುತ್ತಿದ್ದೆ ನೀನ್ಯಾಕೆ??
ಕೃಷ್ಣವರ್ಣ ಸುಂದರಿಯಾದರೂ ನೀನು...
ನಿನ್ನ ಹಾಲ್ಬಣ್ಣದ ನಗುವ ಕಂಡು ಮೌನಿಯಾದೆ ನಾನು...
ಹಂಸದ ನಡೆಯಂತಿದ್ದ ನಿನ್ನ ಕಾಲ್ನಡಿಗೆ...
ನನಗರಿವಿಲ್ಲದೆ ಸೋತೆ ನಾ ನಿನ್ನ ಹೂ ನಗೆಗೆ...
ಯಾರ ಬಳಿ ಹೇಳಲಿ ನನ್ನ ಮನದ ಹೊಯ್ದಾಟವನು...
ಹೇಳಿ ಹೋಗು ಒಮ್ಮೆ ನೀ ನಿನ್ನ ಹೆಸರನು