ಹೇಗಿದ್ದ ಹೇಗಾದ ಗೊತ್ತ? ನಮ್ಮ ......

ಹೇಗಿದ್ದ ಹೇಗಾದ ಗೊತ್ತ? ನಮ್ಮ ......

ಬರಹ

ಪ್ರೀತಿಯ ಗೆಳೆಯ - ಗೆಳತಿಯರೆ ....

ಅವನೊಬ್ಬ ಆದರ್ಶ ವಿಧ್ಯಾರ್ಥಿ, ಅತಿ ಬುದ್ಧಿವಂತ, ಮೌನಿ ಮತ್ತು ಸರಳ ಜೀವಿಯಾಗಿದ್ದ ಕಣ್ರೀ. ಅಪ್ಪ - ಅಮ್ಮ ಇಬ್ಬರೂ ವೈದ್ಯರು ಆದರೆ ಇವನು ಇಂಜಿನಿಯರಿಂಗ್ ಓದೋವಾಗ ಹೊಡೆದದ್ದು ಬೈಸಿಕಲ್. ನಾವು ಓದಿದ್ದು ದಾವಣಗೆರೆಯ ಬಾಪೂಜಿ ಕಾಲೇಜು ಅವನು ಓದಿದ್ದು ಅಲ್ಲಿಯ ಬೀಡೀಟಿ ಕಾಲೇಜು, ಒಂದೇ ವರ್ಷ ಕಾಲೇಜು ಮುಗಿಸಿದ ನಾವು, ನಮ್ಮವನೊಬ್ಬ ಭಯೋತ್ಪಾದಕ ಆಗ್ತಾನೆ ಅಂದು ಕೊಂಡಿರಲಿಲ್ಲ. ಒಂದು ದಿನ ಲಂಡನ್ ನ ವಿಮಾನ ನಿಲ್ದಾಣಕ್ಕೆ ಮಾನವ ಬಾಂಬ್ ಆಗಿ ಕಾರನ್ನು ಡಿಕ್ಕಿ ಹೊಡೆಸುತ್ತಾನೆ ಅಂತ ಕನಸೂ ಕಂಡಿರಲಿಲ್ಲ.

ನಾನು ಯಾರ ಬಗ್ಗೆ ಮಾತಾಡ್ತಿದೀನಿ ಅಂತ ಗೊತ್ತಾಗಿರಬೇಕಲ್ವ? ಹೌದ್ರೀ ನಾನು ಭಯೋತ್ಪಾದಕ ಕಫೀಲ್ ಬಗ್ಗೆ ಹೇಳ್ತಿರೋದು.

ಅಂತ ಒಳ್ಳೆಯ, ಸಭ್ಯ ಮತ್ತು ಆದರ್ಶ ಹುಡುಗ ಭಯೋತ್ಪಾದಕ ಏಕಾದ?

ಕೇವಲ ಒಂದು ಪ್ರಚೋದನಕಾರಿ ಭಾಷಣ ನಮ್ಮನ್ನು ಬದಲಿಸಬಹುದು ಅನ್ನೋದಕ್ಕೆ ಈ ಕಫೀಲ್ ನೆ ಸಾಕ್ಷಿ ಕಣ್ರೀ. ಭಯೋತ್ಪಾದಕರು ಕಫೀಲ್ ನಂತ ಅಮಾಯಕರನ್ನು ಪ್ರಚೋದಿಸಿ ಸಾಧಿಸೋದೇನು? .... ಅಮೇರಿಕನ್ನರ, ಇಂಗ್ಲೀಷರನ್ನು ಕಂಡರೆ ಇವರಿಗೆ ಏಕೆ ವಿರೋಧ? ...... ಕೇಳಿ ಹೇಳ್ತೀನಿ .....

೧: ಅವರಿಗೆ ಧರ್ಮವೆ ಎಲ್ಲ
೨: ಅವರಿಗೆ ಅಮೇರಿಕದಂತಹ ಪ್ರಜಾಪ್ರಭುತ್ವ ದೇಶ ಇಷ್ಟ ಇಲ್ಲ, ಸ್ವತಂತ್ರ ಇಷ್ಟ ಇಲ್ಲ, ಅಲ್ಲಿ ಅವನಿಗೆ ಅವನೆ ನಾಯಕ
೩: ಮುಸ್ಲಿಮ್ ದೇಶಗಳಾದ ಜೋರ್ಡಾನ್, ಈಜಿಫ್ಟ್, ಸೌದಿ ಅರೇಬಿಯದ ಸರ್ಕಾರಗಳನ್ನು ದ್ವಂಸ ಗೊಳಿಸುವುದೇ ಅವರ ಗುರಿ
೪: ಇಸ್ರೇಲ್ ಅನ್ನು ಮಿಡಲ್-ಈಸ್ಟ್ ನಿಂದ ಕಿತ್ತುಕೊಳ್ಳಬೇಕೆಂಬುದು ಅವರ ಆಸೆ
೫: ಕ್ರಿಸ್ಚಿಯನ್ನರನ್ನು ಮತ್ತು ಹೀಬ್ರೂಗಳನ್ನು ಏಶ್ಯದಿಂದ ಬೇರೆ ಮಾಡುವ ಮನಸ್ಸು
೬: ಪ್ರತಿ ಕ್ರುತ್ಯದಿಂದ ಇಂಗ್ಲೀಷರನ್ನು ನಡುಗಿಸುವ ಬಯಕೆ, ಏಕಂದ್ರೆ ಅಮೇರಿಕನ್ನರು ತಮ್ಮ ಆದಿಗೆ ಅಡ್ಡಗಾಲು ಎಂಬ ಸಿಟ್ಟು

ಅಂದ ಹಾಗೆ ಈ ಆಲ್-ಖೇದ ಆತ್ಮಹತ್ಯಾ ದಳ, ಭಯೋತ್ಪಾದನೆಯ ತರಬೇತಿ ಕೇಂದ್ರಗಳು ೫೦ ಕ್ಕೂ ಹೆಚ್ಹು ದೇಶಗಳಲ್ಲಿ, ಮುಖ್ಯವಾಗಿ ಅಫ್ಗಾನಿಸ್ತಾನದಲ್ಲಿ ಇವೆ. ಆಲ್-ಖೇದಗೆ ಅತಿ ಮುಖ್ಯವಾಗಿ ಅಮೇರಿಕನ್ನರ ಕಂಡರೆ ಆಗುವುದಿಲ್ಲ.

ಸ್ವಲ್ಪ ಅಮೇರಿಕನ್ನರ ಗುರಿಗಳು ಏನು ಅಂತ ತಿಳಿದುಕೊಳ್ಳೋಣ ... ಬನ್ನಿ .....

೧: ಎಲ್ಲ ಆಲ್-ಖೇದ ನಾಯಕರನ್ನು ಪತ್ತೆ ಹಚ್ಹಿ, ತಮ್ಮ ಬಂಧನದಲ್ಲಿ ಇಟ್ಟುಕೊಳ್ಳುವುದು
೨: ಮುಸ್ಲಿಮ್ ದೇಶಗಳಲ್ಲಿ ಬಂಧನಕ್ಕೆ ಒಳಪಟ್ಟಿರುವ ಎಲ್ಲ ಅಮೇರಿಕನ್ನರನ್ನ ಮತ್ತು ವಿದೇಶಿಯರನ್ನ ಬಿಡಿಸಿಕೊಳ್ಳುವುದು
೩: ಮುಸ್ಲಿಮ್ ದೇಶಗಳಲ್ಲಿರುವ ಅಮಾಯಕ ಪತ್ರಕರ್ತರು, ಸಮಾಜ ಕಾರ್ಯಕರ್ತರುಗಳ ರಕ್ಷಣೆ
೪: ಶಾಶ್ವತವಾಗಿ ಆದಷ್ಟು ಬೇಗ ಭಯೋತ್ಪದಕ ತರಬೇತಿ ಕೇಂದ್ರಗಳನ್ನು ಭಸ್ಮ ಮಾಡುವುದು, ಉಗ್ರರನ್ನು ಶಿಕ್ಷಿ

ನೀವೇನಂತೀರ ನಲ್ಮೆಯ ಸ್ನೇಹಿತರೆ? ದಯವಿಟ್ಟು ಪ್ರತಿಕ್ರಹಿಸಿ ......

ನಿಮ್ಮ ಪ್ರೀತಿಯ ಕನ್ನಡಿಗ
-ಗಿರೀಶ ಮಲ್ಲೇನಹಳ್ಳಿ ಚನ್ನಕೇಶವ (ಮಚಗಿ)

ಇದನ್ನೂ ಓದಿ: http://en.wikipedia.org/wiki/Kafeel_Ahmed

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet