ಹೇಗೆ ತಾನೆ ಮರೆಯಲಿ ನಿನ್ನ
ಹೇಗೆ ತಾನೆ ಸಹಿಸಲಿ
ಹೇಗೆ ತಾನೆ ಮರೆಯಲಿ!!
ಆ ನಿನ್ನ ದೇಶಪ್ರೇಮದ ಕೆಚ್ಚದೆಯ ಕಿಚ್ಚ
ಸುಟ್ಟ ಆವೈರಿಯ ಅಟ್ಟಹಾಸವ!!
ಅಂದು ನೀನು ಸೈನ್ಯ ಸೇರಿದ ದಿನ
ಊರೆಲ್ಲ ನಿನ್ನ ದೇಶಪ್ರೇಮ ಕಂಡು
ಸಂಭ್ರಮಿಸಿದ ಕ್ಷಣ!!
ನಿನ್ನ ಶಾಲೆಗೆ ಕರೆಸಿ ಗೌರವಿಸಿದಾಕ್ಷಣ
ಯೋಧನುದಿಸಿದ ನಾಡೆಂದು
ಹಾಡಿ ಹರೆಸಿದಾ ದಿನ!!
ಇಂದು ಯುದ್ಧದಿ ಹೋರಾಡಿ
ಹತ್ತಾರು ಆ ವೈರಿಗಳ ಕೋಂದು
ವೀರ ಮರಣವಹೋಂದಿ
ಹುತಾತ್ಮನಾದ ನಿನ್ನ
ಆಮರ ಜೀವವಂತವಾದ ನಿನ್ನ!!
ದೇಶ ಇಂದು ರಾಷ್ಟ್ರ ಧ್ವಜವ
ನಿನ್ನೆದೆಯ ಮೇಲೆ ಸರ್ಮಪಿಸಿ
ನವಿಸುತಿದೆ ನಿನಗೆ ಕೋಟಿ ಕೋಟಿ ನಮನ!
ನಿನ್ನಿಂದ ಹೆಸರಾಯ್ತು ಊರು ಶಾಲೆ
ಹೆತ್ತ ತಾಯಿ ತಂದೆಯರ ವಂಶೊತ್ಥಾನ
ನಿನ್ನಿಂದ ಸ್ಪೂರ್ತಿಸೆಲೆಯಾಗಿ
ನಮ್ಮ ಯುವಜನಕ್ಕಾಯ್ತು ಉತ್ತೇಜನ!!