ಹೇಗೆ ಸುಮ್ಮನಿರಲಿ?

ಹೇಗೆ ಸುಮ್ಮನಿರಲಿ?

ಕವನ

ಮೇಘವರ್ಣನೆ ಏಕೆ ಈತರ

ಕಾಡುತಿರುವೆಯೊ ಕಂದನೇ

ನಾರಿಮಣಿಗಳು ದೂರು ತಂದಿರೆ

ಹೇಗೆ ಇರುವುದು ಸುಮ್ಮನೆ

 

ಗಡಿಗೆ ಒಡೆಯುವೆ ಬೆಣ್ಣೆ ಕದಿಯುವೆ

ಎಂಬ ಮಾತನು ನುಡಿವರು

ಜಳಕಕಿಳಿದಿರೆ ತರುಣಿ ನದಿಯಲಿ

ಸೀರೆ ಕದಿಯುವೆ ಎನುವರು

 

ವಿಷದ ಉರಗವ ಹಿಡಿದು ಬಾಗಿಸಿ

ಶಿರದಿ ಮಾಡಿದೆ ನರ್ತನ

ಒಂದು ಬೆರಳಲಿ ಗಿರಿಯನೆತ್ತಿದೆ

ಎಂದು ಕೊಟ್ಟರು ದೂರನಾ

 

ಎತ್ತಿಕೊಳ್ಳುತ ಮೊಲೆಯನುಣಿಸಿರೆ

ಸತ್ತು ಬಿದ್ದಳು ಪೂತನಿ

ಮರದ ಕಾಂಡಕೆ ಕಟ್ಟಿ ಬಿಗಿದರೆ

ಸರಿಸಿ ಬಿಟ್ಟೆಯ ಮರವನೇ

 

ಮಾತೆ ಮಾತಿಗೆ ನುಡಿಯನಾಡದೆ

ಮನದೆ ನಗುವನು ಮಾಧವ

ಕಪಟ ನಾಟಕ ಸೂತ್ರಧಾರಿಯೆ

ಹರಸು ನಮ್ಮನು ಕೇಶವ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್