ಹೇಳದೆ ಉಳಿದ ಸಾಲು...
ಇವು ಹೇಳದೆ ಉಳಿದ ಸಾಲುಗಳು. ಆಗಾಗ ಮನಸ್ಸಿನಲ್ಲಿ ಉಳಿದು ಕಾಡಿವೆ. ಬರೆಯೋ ಪ್ರತಿ ಸಾಲಲ್ಲೂ ಇಣುಕಿವೆ. ಈಗ ಒಟ್ಟಾಗಿ ಬರೆದಿದ್ದೇನೆ. ಇನ್ನೂ ಹಲವು ಸಾಲುಗಳು ಬಾಕಿಯಿವೆ. ಅವುಗಳನ್ನೂ ಬರೆಯುವೆ. ಸದ್ಯಕ್ಕೆ ಇವುಗಳನ್ನ ಓದಿ ಏನಾದ್ರೂ ಹೇಳಬೇಕು ಅನಿಸಿದ್ರೇ ಕಂಡಿತಾ ಹೇಳಿ. ಧನ್ಯವಾದಗಳು..ಓದಿದವರಿಗೆ..ಓದದೇ ಇರೋವವರಿಗೂ..
ಒಲವಿನ ಓಲೆ ಬರೆಯುವೇ ಒಂದು
ಚೆಲುವಿನ ನೋಟ ನೀ ಬೀರು ಇಂದು...
********
ಒಂದು ಪುಟ್ಟ ಕತೆ ಬರೆಯಬೇಕು
ಆಗುತ್ತಿಲ್ಲ. ಕಲ್ಪನೆ ಇದೆ. ವಿಷಯವೂ
ಇದೆ. ಆದರೆ, ಕೇಳಲು ಅವಳಿಲ್ಲ.
********
ಒಂದೊಮ್ಮೆ ಕನಸು ಕಂಡೆ.
ಕನಸು ನನಸಗೊ ಮೊದಲೇ
ಇನ್ನೊಂದು ಕನಸು ಬಿತ್ತು. ಅದುವೇ
ನನ್ನ ಮಗಳು ಕನಸು...
********
ಅಲ್ಲಿ ನೋವು ಇದೆ. ಆಕ್ರಂದನ ಇದೆ.
ಈ ದು:ಖದ ಮಧ್ಯೆ ಬಿಳಿ ಚೆಟ್ಟೆಗಳ
ಸ್ವಚ್ಛಂದದ ಹಾರಾಟವೂ ಇದೆ. ಹೌದೇ..?
ಸರಿ ಏನದು..? ಜೆಸ್ಟ್ ರಿಲ್ಯಾಕ್ಸ . ಅದು
ದೊಡ್ಡ ಆಸ್ಪತ್ರೆ.
*******
ಒಬ್ಬರನ್ನ ಮರೀಬೇಕು. ಆದರೆ,
ಯಾರನ್ನ ಮರೀಬೇಕು ಅನ್ನೋದು
ಮರೆತು ಹೋಗಿದೆ.
*******
ನೋವೊಂದು. ಭಾವ ನೂರು.
ಕವಿತೆ ಇನ್ನೊಂದು..ನೋವು
ಮತ್ತೊಂದು ಹೊಸ ಹೃದಯಕ್ಕೆ ಮತ್ತೆ
ತೆರೆದುಕೊಳ್ಳುತ್ತಿದೆ ಈ ಹೃದಯ
********
ಭಾವನೆಗಳ ಸಾಲುಗಳ ಮುತ್ತಿಕ್ಕುತ್ತಿವೆ.
ನೋವಿನಿಂದಲ್ಲ. ಅವಳ ನೆನಪಿನಿಂದ.
ಅದೆಷ್ಟು ನಿಜ, ಹೇಳೊದು ಕಷ್ಟ. ಒಲವಿನ
ಓಲೆಯ ರಭಸವೇ ಹಾಗಿದೆ.
*********
-ರೇವನ್
Comments
ಉ: ಹೇಳದೆ ಉಳಿದ ಸಾಲು...
ಉ: ಹೇಳದೆ ಉಳಿದ ಸಾಲು...