ಹೊಂಟಾರ ಸಂಬಂಧದ ಕೊಂಡಿ ಮುರಿದು...

ಹೊಂಟಾರ ಸಂಬಂಧದ ಕೊಂಡಿ ಮುರಿದು...

ಕವನ

ನನ್ನವರು ಎಂದೆ ನನ್ನವರು ಎಂದೆ

ನನ್ನವರೇ ಜೀವ ಎಂದೆ

ನನ್ನವರೇ ಎಲ್ಲಾ ಎಂದೆ

ನನಗೆ ನನ್ನವರು ಇದ್ದಾರೆ ಎಂದೆ

 

ಹೇಳಿದರು ನಿನಲ್ಲ ನಿನಲ್ಲ

ಎಂದಿಗೂ ನೀ ನಿನಲ್ಲ

ನಮ್ಮವನು ನಿನಲ್ಲ

ನೀ ನಮ್ಮವನು ಅಲ್ಲವೇ ಅಲ್ಲ

 

ಆಸರೆ ಇಲ್ಲದ ಬಾನು

ನೀರಿಲ್ಲದ ಮಿನು

ದಿಕ್ಕು ಇಲ್ಲದ ಪರದೇಸಿ ನಾನು

ವೇದನೆ ಎದೆಯಲ್ಲಿ ನುಂಗಿ ಇರುವೆನು.

 

ಕರುಳು ಹರಿದರು

ನೋವು ಕೊಟ್ಟರು

ಮಾತು ಬಿಟ್ಟರು

ದೂರ ಮಾಡಿದರು

 

ಅಣ್ಣಾ ಎನ್ನುವ ಶಬ್ದ ತೊರೆದು

ಕರುಳ ಬಳ್ಳಿ ತೊರೆದು

ಹಿಂದೆ ಹಿಂದೆ ಸರಿದು

ಹೊಂಟಾರ ಸಂಬಂಧದ ಕೊಂಡಿ ಮುರಿದು

-ಹುಚ್ಚೀರಪ್ಪ ವೀರಪ್ಪ ಈಟಿ,  ಶಿಕ್ಷಕರು, ಸಾ ನರೇಗಲ್ಲ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್