ಹೊಂದಿಸಿ ಬರೆಯಿರಿ
ಕವನ
ಭಾವನೆಗಳ ಮಳೆಗೈದು
ಬಂಧಗಳ ಕೊಳೆ ತೊಳೆದು
ನೆಮ್ಮದಿಗೆ ಮೈ ಒಡ್ಡುವ ರೀತಿ
ಹೊಂದಿಸಿ ಬರೆಯುವ ನೀತಿ...
ಪ್ರತಿ ದೃಶ್ಯವದು
ಸೊಗಸಾದ ಸಾಹಿತ್ಯ
ಪ್ರೀತಿ ಸ್ನೇಹಕ್ಕೊಂದು
ಯಾರೂ ನೀಡಿರದ ಆತಿಥ್ಯ
ಕಂಡು ಬೆರಗಾದೆ ನೋಡಿ
ಹೊಂದಿಸಿ ಬರೆದ ಮೋಡಿ...
ಆಸೆ-ನಿರಾಸೆ, ಸ್ನೇಹ-ಪ್ರೇಮ,
ಸೋಲು-ಗೆಲುವು
ಎಲ್ಲವನ್ನೂ ಬಂದಂತೆ ಸ್ವೀಕರಿಸಿ,
ಬದುಕಿನ ಮಜಲುಗಳ ಹೊಂದಿಸಿ ಬರೆಯಿರಿ...
ಚಿತ್ರ್
