ಹೊಂಬೆಳಕಿನ ಹಬ್ಬ
ಕವನ
ಹಬ್ಬ ಹಬ್ಬ, ಬಂತು ಹಬ್ಬ
ಹೊಂಬೆಳಕಿನ ದೀಪದ ಹಬ್ಬ
ಚಿಣ್ಣರೆಲ್ಲರ ಪ್ರೀತಿಯ ಹಬ್ಬ
ಸುರ್, ಸುರ್ ಬತ್ತಿಯ ಹಬ್ಬ.
ಸಾಲು ಸಾಲಿನಲ್ಲಿ ಮಿಂಚಿನ ದೀಪ
ಕತ್ತಲು ಸರಿಸುವ ದಾರಿಯ ದೀಪ
ಕಣ್ಮನ ಸೆಳೆಯುವ ಸುಂದರ ದೀಪ
ಸಂತಸ ತರುವ ಮಣ್ಣಿನ ದೀಪ...
ವರ್ಷದ ಹರುಷದ ಹಬ್ಬವು
ಬಗೆಬಗೆ ತಿನಿಸಿನ ದಿಬ್ಬವು...
ಹೊಸ ಉಡುಪಿನಲೀ ಸಂಭ್ರಮವು
ಮತಾಪು ಹಚ್ಚುವ ಸಡಗರವು.
ಢಂ,ಢಂ,ಢಂ ಲಕ್ಷ್ಮೀ ಪಟಾಕಿಯು
ಬರ್ ಬರ್ ಸದ್ದಲಿ ಹೂಕುಂಡವು
ಗರ ಗರ ತಿರುಗುವ ವಿಷ್ಣುಚಕ್ರವು
ಚಿಣ್ಣರ ಮೊಗದಲಿ ಹರ್ಷದ ನಲಿವು.
ಹಬ್ಬದ ಹಿರಿಮೆಯ ತಿಳಿಯಿರಿ ಚಿಣ್ಣರೆ
ಮತಾಪಿನ ಸಂಗಡ ಮೈ ಮರೆಯದಿರಿ
ಪಾಲಕರೊಡನೆ ಹಚ್ಚಿರಿ ಪಟಾಕಿಯನ್ನು.
ಸಂತಸ,ಸಂಭ್ರಮದಲ್ಲಿ ಹಬ್ಬವನ್ನು.
-ವೀಣಾ ಕೃಷ್ಣಮೂರ್ತಿ ದಾವಣಗೆರೆ
ಚಿತ್ರ ಕೃಪೆ: ಅಂತರ್ಜಾಲ ತಾಣ
ಚಿತ್ರ್