ಹೊಗಳು ಪಂಡಿತರು
ಕವನ
ಮಹಾ
ಮಹಿಮರು
ಬರೆದುದೆಲ್ಲಾ
ಯಾವತ್ತಿಗೂ
ರೂಪಕಗಳೇ ?
ಪಾಪ ,
ಕಷ್ಟ ಪಟ್ಟು
ಓದಿ
ಅರೆದು ಕುಡಿದು
ಜೀರ್ಣಿಸಿ
ಕೊಂಡು
ಬರೆದವನ
ಬರಹ
ನೋಡಿ
ಹೇಳುವರು
ಇದರಲ್ಲೇನಿದೆ
ಎಲ್ಲಾ
ವಿ
ರೂಪಕಗಳೇ ...... ?!
ಛಲವಾದಿಯೆ !
***
ಬಲ್ಲಿರಾ
ಗಾಂಧಿ
ನಿನ್ನ
ನೆನಪುಗಳು
ಮೂಲೆ
ಕಂಬವನು
ಹಿಡಿದು
ಕುಳಿತಿವೆ
ಇದಕ್ಕೆಲ್ಲ
ಇಂದು
ಹೊಣೆ ಯಾರು?
***
ಹನಿಗಳು
ಮಾತಿನೊಳಗೆ
ಹಿಡಿತವಿದ್ದಂತೆಯೇ
ಕೃತಿ ಬರಲಿ !
***
ಒಲವಿನಾಟ
ಹಿತಮಿತದಲ್ಲಿರೆ
ಸುಖ ಸಂಸಾರ !
***
ಕಸ್ತೂರಿಯಲಿ
ಪರಿಮಳವಿದ್ದಂತೆ
ಬದುಕಿರಲಿ!
***
ಸವಿ ನೆನಪು
ಬರುವುದೇ ನನಗೆ
ರಾತ್ರಿಯಾದಂತೆ !
***
ಈಗಿನ ಯುವ ಜನತೆ, ಜೊತೆಗೆ
ನಮಗೆಲ್ಲ ಬಹಳ ತಿಳಿದಿದೆ
ಎನ್ನುವವರ ನಡುವೆ
ಹಿರಿಯರೆಂದೆನಿಸಿಕೊಂಡವರು
ಸುಮ್ಮನೆ ಇರುವುದೇ ಲೇಸು!
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
