ಹೊಗೇನಕಲ್ ಉಳಿಸಿಕೊಳ್ಳೋಣ

ಹೊಗೇನಕಲ್ ಉಳಿಸಿಕೊಳ್ಳೋಣ

ಬರಹ

ಅಪ್ಪಟ ಕನ್ನಡ ಪ್ರದೇಶವಾದ ಹೊಗೇನಕಲ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಯೋಜನೆ ನಡೆಸುವುದರ ಮೂಲಕ ತಮಿಳುನಾಡು ಸರಕಾರ ಕನ್ನಡ ಪ್ರದೇಶವನ್ನು ಒತ್ತುವವಿ ಮಾಡಲು ಪ್ರಯತ್ನಿಸುತ್ತಿದೆ. ಇದರ ಬಗ್ಗೆ ನಮ್ಮ ಸರಕಾರ ಮತ್ತು ಇತರ ಚುನಾವಣೆಯಲ್ಲಿ ಆಯ್ಕೆಯಾದ ನಾಯಕರುಗಳು ದನಿಯೆತ್ತದಿರುವುದು ಒಂದು ದೊಡ್ಡ ದುರಂತ. ಈ ಸಮಯದಲ್ಲಿ ಸುಮ್ಮನಿದ್ದರೆ ಹೊಗೇನಕಲ್ ಕರ್ನಾಟಕದ ಕೈತಪ್ಪಿ ಹೋಗುವುದು ಖಂಡಿತ.

ಹೊಗೇನಕಲ್  ಅಕ್ರಮ ಯೋಜನೆ ವಿರುದ್ದ ಪ್ರತಿಭಟನೆ ನಡೆಸುತ್ತರುವ ಕರವೇಗೆ ಬೆಂಬಲಿಸಿ ಹೊಗೇನಕಲ್ ಅನ್ನು ಕನ್ನಡ ಪ್ರದೇಶವಾಗಿಯೇ ಉಳಿಸಿಕೊಳ್ಳೋಣ

ಅಕ್ರಮ ಯೋಜನೆ ವಿರುದ್ದ ಖಂಡನಾ ಸಭೆಯಲ್ಲಿ ಕೈಗೊಂಡ ನಿರ್ಣಯಗಳು-

  • ಹೊಗೇನಕಲ್ ಕಾಮಗಾರಿಯನ್ನು ತಮಿಳುನಾಡು ಸ್ಥಗಿತಗೊಳಿಸಬೇಕು.
  • ಕೇಂದ್ರ ಕೂಡಲೇ ಜಂಟಿ ಸಮೀಕ್ಷೆ ಕೈಗೊಳ್ಳಬೇಕು.
  • ಕೇಂದ್ರದ ಮೇಲೆ ಒತ್ತಡ ಹೇರಲು ಸರಕಾರ ಸರ್ವ ಪಕ್ಷಗಳ ನಿಯೋಗವನ್ನು ದಿಲ್ಲಿಗೆ    ಕರೆದೊಯ್ಯಬೇಕು.
  • ಯೋಜನೆ ಕುರಿತು ಸಂಸತ್ತಿನಲ್ಲಿ ದನಿ ಎತ್ತುವಲ್ಲಿ ವಿಫಲವಾಗಿರುವ ರಾಜ್ಯದ ಸಂಸತ್ ಸದಸ್ಯರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು.
  • ಕೇಂದ್ರ ಗ್ಯಾರಂಟಿ ನೀಡಿರುವುದರಿಂದ ಹೊಗೇನಕಲ್ ಯೋಜನೆಗೆ ಜಪಾನ್ ಕೊಟ್ಯಾಂತರ ರೂ ನೆರವು ನೀಡಿದೆ. ಭದ್ರತಾ ಪತ್ರವನ್ನು ಕೇಂದ್ರ ವಾಪಸ್ ಪಡೆದುಕೊಳ್ಳಬೇಕು.
  • ಯೋಜನೆ ಸ್ಥಗಿತಗೊಂಡಿದೆ ಎಂದು ಕೇಂದ್ರ ಘೋಷಿಸುವ ತನಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಲಾಗುವುದು, ತಮಿಳು ಸಿನೆಮಾ ಮತ್ತು ಕೇಬಲ್ ಚಾನೆಲ್ ಗಳನ್ನು ಬಹಿಷ್ಕರಿಸಲಾಗುವುದು.

ಖಂಡನಾ ಸಭೆಯ ಪತ್ರಿಕಾ ವರದಿಯನ್ನು ಈ ಕೆಳಗಿನ ಕೊಂಡಿಯಲ್ಲಿ ನೋಡಿ-

http://karave.blogspot.com/2010/04/hogenakal-khandana-sabhe.html