ಹೊಗೇನಕಲ್ ಪ್ರೀತಿ.ಎಂ. ಕೃಪೆ. ಕ.ರ.ವೇ.

ಹೊಗೇನಕಲ್ ಪ್ರೀತಿ.ಎಂ. ಕೃಪೆ. ಕ.ರ.ವೇ.

ಬರಹ

ಕನ್ನಡಿಗರ ಮೇಲೆ ತಮಿಳರ ಕುತಂತ್ರ ಇವತ್ತಿಂದಲ್ಲ ನಿನ್ನೇದಲ್ಲ. ತಲೆತಲಾಂತರದಿಂದಲೂ ಇವರು ಕನ್ನಡಿಗರಿಗೆ ಕಿರುಕುಳ ಕೊಡ್ತಾನೇ ಇದಾರೆ. ಆದ್ರೆ ಅವತ್ತಿಗೂ ಇವತ್ತಿಗೂ ಎದ್ದ್ ಕಾಣ್ತಿರೋ ವ್ಯತ್ಯಾಸ ಏನಪ್ಪಾ ಅಂದ್ರೆ - ಅವತ್ತು ಅವರ ಕಿರುಕುಳ ನಿಲ್ಲಿಸಿ ಕರ್ನಾಟಕವನ್ನ ರಕ್ಷಿಸೋ ಗಂಡಸರು ಸರಿಯಾದ ಸ್ಥಾನಗಳಲ್ಲಿ ಇದ್ದರು; ಇವತ್ತು ಅಂತಾ ಗಂಡಸರು ಇದ್ದರೂ ಅವರಿಗೇ ಎಲ್ಲರೂ ತೊಂದರೆ ಕೊಡೋರೇ!

ಇತ್ತೀಚೆಗೆ ಕರ್ನಾಟಕಕ್ಕೆ ಸೇರಿದ ಹೊಗೇನಕಲ್ ನಡುಗಡ್ಡೆ ತಮಿಳ್ನಾಡಿಗೆ ಸೇರಿದೆ ಅನ್ನೋ ಸುಳ್ಳು ಹಬ್ಬಿಸಿ ಅಲ್ಲಿ ನೀರಾವರಿ ಮತ್ತು ವಿದ್ಯುತ್ ಯೋಜನೆಗಳಿಗೆ ತಮಿಳ್ನಾಡು ಕೈಹಾಕಿದೆ. ಔರೂ ನೋಡುದ್ರು - ಈ ಕನ್ನಡಿಗರು ಪೆದ್ದುಮುಂಡೇವು, ಷಂಡ್ರು, ಇವ್ರಿಗೆ ತಮ್ಮ ಹೆಂಡತೀನ ಹೊತ್ತುಕೊಂಡು ಹೋದ್ರೂ ಗೊತ್ತಾಗಲ್ಲ, ಗೊತಾಗ್ತಿದ್ರೂ ಏನೂ ಕಿಸಿಯಕ್ ಆಗಲ್ಲ, ನಮ್ಮ ತೀಟೆ ನಾವು ತೀರುಸ್ಕೊಳಮ ಅಂತ. ಕಾವೇರಿ ನದಿನೀರು ಹಂಚಿಕೆ ವಿಷಯ ಇನ್ನೂ ನ್ಯಾಯಾಲಯದಲ್ಲಿ ಇರುವಾಗ್ಲೇ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳು ಅಂತ ಹೇಳ್ಕೊಳೋ ಈ ತಮಿಳ್ರು ಹೇಗೆ ಹೊಗೇನಕಲ್ ನಲ್ಲಿ ಯೋಜನೆಗೆ ಕೈ ಹಾಕುದ್ರು? ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ಇಲ್ಲದೇ ಇರೋ ಪರಿಸ್ಥಿತಿ ನೋಡಿ ತಮ್ಮ ತೀಟೆ ತೀರಿಸಿಕೊಳ್ಳೋ ಖದೀಮರು ಇವ್ರು!

ನಾವು ಇನ್ನು ಎಚ್ಚೆತ್ತುಕೊಳ್ಳಬೇಕಷ್ಟೆ! ತಮಿಳ್ನಾಡಿಂದ ನಮಗೆ ಏನೇನು ತೊಂದ್ರೆ ಆಗ್ತಿದೆ ಅಂತ ಅರ್ಥ ಮಾಡ್ಕೋಬೇಕು. ಯಾಕ್ ತೊಂದ್ರೆ ಆಗ್ತಿದೆ ಅಂತ ಅರ್ಥ ಮಾಡ್ಕೋಬೇಕು. ನಮ್ಮ ರಾಜಕಾರಣಿಗಳು ಕರ್ನಾಟಕವನ್ನ ಮಾರ್ಕೋತಿದಾರಲ್ಲ, ಇದನ್ನ ನಿಲ್ಲಿಸೋದು ಹೇಗೆ ಅಂತ ಅರ್ಥ ಮಾಡ್ಕೋಬೇಕು. ಇನ್ನೇನು ಕರ್ನಾಟಕದಲ್ಲಿ ಚುನಾವಣೆ ನಡ್ಯೋದ್ರಲ್ಲಿದ್ಯಲ್ಲ, ಕೇಳ್ಬೇಕು ನಮ್ಮ ರಾಜಕಾರಣಿಗಳ್ನ - "ಥೂ! ನಿಮ್ಮ ಜನುಮಕ್ಕೆ ನಾಚಿಕೆ ಆಗಬೇಕು! ಕಾವೇರಿ ತೀರ್ಪಲ್ಲಿ ನಮಗೆ ಕೆರ ತೊಗೊಂಡು ಹೊಡ್ದಿದಾರಲ್ಲ, ನಮ್ಮ ನೀರೆಲ್ಲಾ ತಮಿಳರಿಗೆ ಬರ್ದು ಕೊಟ್ಟಿದಾರಲ್ಲ, ಅದಕ್ಕೆ ನೀವ್ ಏನ್ ಮಾಡ್ತೀರಿ? ಹೊಗೇನಕಲ್ನ ತಮಿಳ್ನಾಡಿಗೆ ಸೇರಿಸಕ್ಕೆ ಹೊರ್ಟಿದಾರಲ್ಲ ತಮಿಳ್ರು, ಅದಕ್ಕೆ ಏನ್ ಕಿಸೀತೀರಿ?" ಅಂತ.

ಇಲ್ಲಾ ನಮ್ಮ ಟೀಷರ್ಟುಗಳ ಮೇಲೆ ಬರಿಸಿಕೊಳ್ಳಬೇಕು, ನಮ್ಮ ಮನೆ ಗೋಡೆಗಳ ಮೇಲೆ ಎಲ್ರುಗೂ ಕಾಣೋಹಂಗೆ ಬರುಸ್ಕೋಬೇಕು, ಅಂತರ್ಜಾಲದಲ್ಲೆಲ್ಲಾ ಒಪ್ಪಿಕೋಬೇಕು - "ಹೌದು! ನಾವು ಕನ್ನಡಿಗರು ಪೆದ್ದುಮುಂಡೇವು, ಷಂಡ್ರು" ಅಂತ.

ಸಂಪರ್ಕಿಸಿ
ನಮ್ಮ ವಿಳಾಸ

ಕರ್ನಾಟಕ ರಕ್ಷಣಾ ವೇದಿಕೆ
ನಂ ೨೯, ಪ್ರವೀಣ್ ಕಟ್ಟಡ, ೫ ನೇ ಮುಖ್ಯರಸ್ತೆ
ಗಾಂಧಿನಗರ
ಬೆಂಗಳೂರು
ಕರ್ನಾಟಕ
ಭಾರತ- ೫೬೦೦೦೯

ದೂರವಾಣಿ

೯೧-೦೮೦-೨೨೩೭೦೦೩೨ (91-080-22370032)

ಈ-ಮೈಲ್ ವಿಳಾಸ

kannada@karnatakarakshanavedike.org