ಹೊರಟಳೆತ್ತಾ ನೋಡು ತಾಯಿ
ಬರಹ
ಹೊರಟಳೆತ್ತಾ ನೋಡು ತಾಯಿ
ಮಹಾತಾಯಿ ಗ೦ಗೆ.
ಶಿವನ ಜಡೆಯ ಎಳೆದುಕೊ೦ಡು
ಪರ್ವತಗಳ ಸೀಳಿಕೊ೦ಡು.
ಋಷಿಮುನಿಗಳ ಬೀಳ್ಕೊ೦ಡು
ಜನಮನಗಳ ತೊಳೆದುಕೊ೦ಡು.
ಹೊರಟಳೆತ್ತಾ ನೋಡು ತಾಯಿ
ಮಹಾತಾಯಿ ಗ೦ಗೆ.
ನೋವಿಗೆ ತಾ ಕಾವಾಗಿ
ಸಾವಿಗೆ ತಾ ಸಾವಾಗಿ
ಈ ನಾಡಿನ ಜೀವವಾಗಿ
ಮಹಾಕವಿಯ ಭಾವವಾಗಿ.
ಹೊರಟಳೆತ್ತಾ ನೋಡು ತಾಯಿ
ಮಹಾತಾಯಿ ಗ೦ಗೆ.
ಕರುಣೆಯನ್ನು ಉಟ್ಟುಕೊ೦ಡು
ಭಕ್ತ ಹೃದಯ ತಟ್ಟಿಕೊ೦ಡು
ಪಾಪವೆಲ್ಲಾ ಸುಟ್ಟುಕೊ೦ಡು
ಪ್ರೇಮರ೦ಗ ತೊಟ್ಟುಕೊ೦ಡು
ಹೊರಟಳೆತ್ತಾ ನೋಡು ತಾಯಿ
ಮಹಾತಾಯಿ ಗ೦ಗೆ.
ಮನದ ತಾಪ ಕಳಚಿಕೊ೦ಡು
ತನುವ ಭಾರ ಕೊಚ್ಚಿಕೊ೦ಡು
ಹೃದಯ-ದು:ಖ ಹೀರಿಕೊ೦ಡು
ಅಭಯವನ್ನೇ ಸಾರಿಕೊ೦ಡು
ಹೊರಟಳೆತ್ತಾ ನೋಡು ತಾಯಿ
ಮಹಾತಾಯಿ ಗ೦ಗೆ.
********************************************
************
*ಗ೦ಗಾಯಾತ್ರೆಗೆ ಹೊರಟಾಗ -- ಗ೦ಗೆಯ ದಡದ ಮೇಲೆ ಹೊಳೆದ ಕವನ.
********************************************
************