ಹೊರದೇಶದಲ್ಲಿ ಬೆಳೆಯುತ್ತೀರೋ ಭಾರತೀಯ ಮಕ್ಕಳ ಪ್ರಶ್ನೆ ಮತ್ತು ಪ್ರತ್ರ್ಯುತ್ತರಗಳು!!

ಹೊರದೇಶದಲ್ಲಿ ಬೆಳೆಯುತ್ತೀರೋ ಭಾರತೀಯ ಮಕ್ಕಳ ಪ್ರಶ್ನೆ ಮತ್ತು ಪ್ರತ್ರ್ಯುತ್ತರಗಳು!!

ಬರಹ

ನಾನ್ ಕೆಲ್ಸಾ ಮಾಡ್ತೀರೋ ಕಂಪನೀನಲ್ಲಿ ನನ್ನ ಸ್ನೇಹಿತೆ ಒಬ್ಬಳಿಗೆ ೨ ಗಂಡು ಮಕ್ಳು. ಒಬ್ಬ ಭಾರತೀಯ, ಮತ್ತೊಬ್ಬ ಅಮೇರಿಕಾ ದೇಶದ ಪ್ರಜೆ. ಅವಳು ೮ ವರ್ಷದ ಹಿಂದೆ ಅಮೇರಿಕಕ್ಕೆ ಬಂದಿದ್ದು. ಬಂದ ೩ನೇ ವರ್ಷಕ್ಕೆ ೨ನೇ ಮಗು ಆಯ್ತು. ಆಗ ಅವರ ಯೊಚ್ನೆಗೆ ಬನ್ದಿದ್ ಏನಪ್ಪಾ ಅಂದ್ರೆ, ನಾವು ಈಗ್ಲೇ ಭಾರತಕ್ಕೆ ಹೋರ್‍ಟೋದ್ರೇ, ದೊಡ್ಡವರಾದ ಮೇಲೆ ಒಬ್ಬ ಅಮೇರಿಕನ್, ಇನೂಬ್ಬ ಭಾರತೀಯ ಅಂತ ಮಕ್ಕಳ ಮಧ್ಯ ಭಿನ್ನಾಭಿಪ್ರಾಯ ಬರಬಹುದು ಅಂತ ೫ ವರ್ಷದಿಂದ ಗ್ರೀನ್ ಕಾರ್ಡ್‌‌ಗೆ ಕಾಯ್ತಾ ಇದಾರೆ. ಗ್ರೀನ್ ಕಾರ್ಡ್ ಬಂದ್ಮೇಲೆ, ಸಿಟಿಜನ್‌ಶಿಪ್ ಸಿಕ್ಕಿದ್ಮೆಲೆ ಭಾರತಕ್ಕೆ ಹೋಗೋಣಾ ಅಂತ. ಆದ್ರೆ ಈ ಮಧ್ಯೆ ಅವರ ೨ನೇ ಮಗನ ಪ್ರಶ್ನೆಗಳಿಗೆ ಉತ್ತರ ಕೊಡೋದಿಕ್ಕೆ ಗಂಡ- ಹೆಂಡತಿ ಇಬ್ರೂ ತಲೆ ಮೇಲ್ ಕೈ ಹೊತ್ಕೊಂದು ಕೂತಿದ್ದಾರೆ . ಆ ಕೆಲವು ಪ್ರಶ್ನೆಗಳನ್ನ ನೀಮಗೋಸ್ಕರ ಇಲ್ಲಿ ಬರಿತಿದ್ದೀನಿ.

ಪ್ರಶ್ನೆ ೧-ಮಗ: ಅಮ್ಮ ನಾನು ಕ್ರೀಸ್-ಮಸ್ ಹಬ್ಬ ಆಚರಿಸ್‌ಬೇಕು ನನ್ಗೆ ಕ್ರೀಸ್-ಮಸ್ ಮರ ತಂದುಕೊಡಿ.
ಅಮ್ಮ: ನಾವು ಆ ಹಬ್ಬ ಆಚರಿಸಲ್ಲ, ನಾವು ಭಾರತೀಯರು.
ಮಗ: ನಾನು ಅಮೇರೀಕಾ ದೇಶದ ಪ್ರಜೆ, ಆದ್ದರಿಂದ ನಾನು ಹಬ್ಬ ಆಚರಿಸ್‌ಬೇಕು. ನನ್ಗೆ ಅದನ್ನ ತಂದು ಕೊಡಿ.
ಪ್ರಶ್ನೆ ೨-ಮಗ: ಅಮ್ಮ ನೀನು, ಅಪ್ಪ ಎಷ್ಟು ವರ್ಷ ಪ್ರೀತಿ ಮಾಡಿದ್ಮೆಲೆ ಮದ್ವೆ ಆದ್ರಿ?
ಅಮ್ಮ: ನಮ್ಮ ದೇಶದಲ್ಲಿ ಅದೆಲ್ಲ ಇಲ್ಲ, ಅಪ್ಪ ಅಮ್ಮ ತೊರಿಸಿದ್ ಹುಡುಗನ್ನೇ ಮದ್ವೆ ಆಗ್‌ಬೇಕು, ನೀನು ಅಷ್ಟೇ ನಾನ್ ತೋರಿಸಿದ್ ಹುಡ್ಗಿನ್ನೆ ಮದ್ವೆ ಆಗ್‌ಬೇಕು
ಮಗ: ನೀನ್ ತೋರ್‌ಸೋ ಹುಡ್ಗಿ ನನ್ಗೆ ಮದ್ವೆ ಆದ್ಮೇಲೆ ಇಷ್ಟ ಆಗ್ಲಿಲ್ಲ ಅಂದ್ರೆ ನಾನು ಅವಳನ್ನ ಬಿಟ್ ಬಿಡ್ತೀನಿ.
ಪ್ರಶ್ನೆ ೩ ಅಮ್ಮ: ಪ್ರತಿ ಸಾರ್ತಿ ೯೫ ಮೇಲೆ ಮಾರ್ಕ್ಸ್ ತೆಗೀತಿದ್ದೆ, ಈ ಟೈಮ್ ನಿಂಗೆ ಏನಾಯ್ತು ೭೫ ತೆಗ್ದಿದ್ದಿಯ
ಮಗ: ಆರ್ ಯೂ ಗೈಸ್ ಕ್ರೇಜೀ? ಪ್ರತಿ ಸಾರಿ ೯೫ ಮೇಲೆ ಬರ್ಬೆಕನ್ದ್ರೆ ಹೇಗಾಗತ್ತೆ
ಮೊನ್ನೆ ಅವನ ಸ್ನೇಹಿತೆಯೊಬ್ಬಳ ಹುಟ್ಟು ಬಬ್ಬದ್ ಪಾರ್ಟೀಗೆ ಹೋಗ್ತಿದ್ರು, ವಿಶಿಂಗ್ ಕಾರ್ಡ್ ನಲ್ಲಿ ಸಹಿ ಮಾಡು ಅಂತ ಕೊಟ್ರೆ, ಮಗ ಸಹಿ ಮಾಡೋದ್ರೂ ಜೊತೆ "ಸಂಜು ಹ್ಯಾಪೀ ಬರ್ತ್‌ಡೇ, ಬಟ್ ಈ ಡೊಂಟ್ ಲೈಕ್ ಯುವರ್ ಅಟ್ಟಿಟ್ಯುಡ್" ಅಂತ ಬರಯೋದೇ. ಕೇಳಿದ್ದಕ್ಕೆ, ನನ್ಗೆ ಅವಳ ಮೇಲಿದ್ದ ಅಭಿಪ್ರಾಯ ಬರ್‍ದೇ ಅಷ್ಟೇ ಅಂದ.

ಮತ್ತೊಂದ್ ಸಾರಿ, ಅವನ ತಂದೆ ಏನೋ ತಪ್ ಮಾಡ್ದ ಅಂತ ಬೈದು ಹೋರ್ಗಾಡೆ ಹೊಕ್ತಾರೆ, ಅವರು ಹೋದ್ ಮೇಲೆ ಅಮ್ಮನ್ನ ಕರ್ಸಿ ಒಂದು ಕಾಗದ ಕೊಟ್ಟು ತಾನು ಹೇಳಿದನ್ನ ಬರಿ ಇದು ಅಪ್ಪನಿಗೆ ನಾನ್ ಕೊಡ್ತೀರೋ ವಾರ್ನಿಂಗ್ ಲೆಟರ್ ಅಂದ, ಆ ಪಾತ್ರದ ಕೆಲವು ತುಣುಕು ನಿಮಗಾಗಿ...

ಅಪ್ಪ, ಈ ಪ್ರಪಂಚದಲ್ಲಿ ತಪ್ ಮಾಡ್ದಿರೊ ವ್ಯಕ್ತಿನೇ ಇಲ್ಲ, ಅನ್ತದ್ರಲ್ಲಿ ನೀನು ನನ್ನ ಸಣ್ಣ ತಪ್ ಗೆ ಇಷ್ಟೊಂದು ಬೈದಿದ್ದಿಯ. ನಿಂಗೆ ಮಕ್‌ಳತ್ರ ಹೇಗೆ ನಡ್‌ಕೊಳ್ಬೇಕು ಅಂತ ಗೊತ್ತಿಲ್ಲ. ನನ್ಗೆ ನಿನ್ ರೀತಿ ಹಿಡಿಸ್ಲಿಲ್ಲ. ನಿನ್ನ ತಪ್ಪನ್ನ ಸರಿ ಮಾಡ್ಕೋ ಅಂದ... ಹಾಗೆ ಡಿಕ್‌ಟೇಟ್ ಮಾಡ್ತಾ, ಅವನ ಅಣ್ಣನ್ನ ಕೇಳ್ತಾನೇ "ಅಣ್ಣ ನಿಂಗೆ ಅಪನ್ ಮೇಲೆ ಏನಾದ್ರೂ ಬರ್ಯೊದಿದ್ಯ" ಅಂತ. ಅದಕ್ಕೆ ಅಣ್ಣ "ಐ ಡುನಟ್ ವಾಂಟ್ ಟು ಬಿ ಪಾರ್ಟ್ ಆಫ್ ದಿಸ್" ಅಂತ, ಮತ್ತೆ ಸಂದೇಶ ಮುಂದುವರಿಸ್ತಾನೆ.. ಅಣ್ಣನಿಗೂ ಇದಕ್ಕೂ ಸಂಬಂದ ಇಲ್ಲ, ಇಲ್ಲಿ ಬರ್ದಿರೋದೆಲ್ಲ ನನ್ನ ಅಭಿಪ್ರಾಯ... ಸನ್ನಿ

ಇನ್ನೂ ಬೇಳಿತಾ ಬೇಳಿತಾ ಮಕ್ಕಳಿಗೆ ಏನೆಲ್ಲಾ ಬುದ್ದಿ ಓಡತ್ತೋ......