*ಹೊಸಜೀವ* - ಒಂದು ಭಾವಗೀತೆ

*ಹೊಸಜೀವ* - ಒಂದು ಭಾವಗೀತೆ

ಕವನ

ಮನದಾಸೆ ಅರಿತಿರುವ ಮನದನ್ನೆ ಮದನಾರಿ

ಮದವೇರಿ ಮನ್ಮಥನ ಮನಗೆಲ್ಲಲು||ಪ||

 

ದುಂಬಿಗಳ ಹೆದೆಯನ್ನು ಮುಂಗುರುಳ ನೋಟದಲಿ

ಹೂಡುತ್ತ ಬಾಣವನ್ನು ಗುರಿಯನಿಟ್ಟು

ಅಂಬುಗಳ ಬಿಡುತಿಹನು ತಲ್ಲಣಿಪದೆದೆಯಲ್ಲಿ

ಒಲಿದು ಬಂದಿರು ತಾ ಮನವನಿಟ್ಟು||

 

ಪ್ರೇಮದಲಿ ಪಲ್ಲವದ ಮೊಗ್ಗೊಂದು ಅರಳುತಿದ

ರಾಜೀವ ಸ್ಪರ್ಶದಲಿ ಕಿರಣವಿಟ್ಟು

ಕಾಮವದು ಮತ್ತೇರಿ ಬೆಂಬಿಡದೆ ಕಾಡುತಿದೆ

ಸವಿಸೊಲ್ಲ ಮೌನದಲಿ ಮುತ್ತನಿಟ್ಟು||

 

ಒಮ್ಮೊಮ್ಮೆ ಕೂಡುತಲಿ‌ ಒಮ್ಮೊಮ್ಮೆ ಅಪ್ಪುತಲಿ

ಅನುಭವಿಸಿ ನಿಂತಿರುವೆ ಮುನಿಸುಬಿಟ್ಟು

ಒಡಲಲ್ಲಿ ಹೊಸಜೀವ ಮೂಡುತ್ತ ಕೊನರುತಿದೆ

ಹರ್ಷದಲಿ ನೌಕೆಯನು ತೇಲಿಬಿಟ್ಟು||

 

-*ಶಂಕರಾನಂದ ಹೆಬ್ಬಾಳ*

ಚಿತ್ರ ಕೃಪೆ: ಅಂತರ್ಜಾಲ ಗೂಗಲ್ 

 

ಚಿತ್ರ್