ಹೊಸತನದ ಬಂಧನ
ಕವನ
ನಿನ್ನೊಲುಮೆ ನನಗಿರಲಿ
ನಾನಿರುವೆ ನಿನ್ನಲ್ಲಿ..
ನೂರೆಂಟು ವಿಘ್ನಗಳ ಅಡಿಯಲ್ಲಿ
ಜೊತೆಯಾಗ ಬಯಸಿರುವೆ ನಿನ್ನ ಮನದಲ್ಲಿ..
ಸಾವಿರ ಜನ್ಮಗಳು ಜಂಟಿಯಾಗಲಿ
ಸಾವೆಂಬುದು ಸೋತು ಸತ್ತುಹೋಗಲಿ..
ಮುಪ್ಪೆ0ಬುದು ಪ್ರೇಮಕೆ ತಾಕದಿರಲಿ
ಕಾಳಜಿಯ ಮುನ್ನುಡಿಯು ಮುಡಿಪಾಗಿರಲಿ..
ಸುಖದ ಸುಪ್ಪತ್ತಿಗೆಯ ನಾ ಕೇಳಲಾರೆ
ಪ್ರೀತಿಯ ಬಡತನದಲಿ ಬೇಯಲಾರೆ..
ಕ್ಷಣ ಕೂಡ ನಿನ್ನಗಲಿ ಬಾಳಲಾರೆ
ಮನಸಿಲ್ಲದ ಪ್ರೇಮವನು ಬೇಡಲಾರೆ..
ಹಸನಾಗಿ ನಗುತಿದೆ ಹೊಸದಾದ ಒಲವು
ಹುಸಿನಗುತ ಒಪ್ಪಿದೆ ಪ್ರೇಮಕೆ ಚೆಲುವು..
ಸೋಲುಂಡ ಬಾಳಲ್ಲಿ ಮರೆಯುವುದು ಗೆಲುವು
ಮೌನದಿ ಮಿಡುಕಾಡಿದೆ ಹೊಸತನದಿ ಮನವು..
-ಭಾರತಿ ಗೌಡ
ಚಿತ್ರ್
