ಹೊಸದಾಗಿ ನಿರ್ಮಾಣದ ಹಂತದಲ್ಲಿರುವ, 'ಫ್ಲೈ ಓವರ್ ಸೇತುವೆ', ಮುಂಬೈ ನಗರದ 'ಮಹೇಶ್ವರಿ ಉದ್ಯಾನ' ದ ಸೌಂದರ್ಯವನ್ನು ಕುಲಗೆಡಿಸುತ್ತಿದೆ !

ಹೊಸದಾಗಿ ನಿರ್ಮಾಣದ ಹಂತದಲ್ಲಿರುವ, 'ಫ್ಲೈ ಓವರ್ ಸೇತುವೆ', ಮುಂಬೈ ನಗರದ 'ಮಹೇಶ್ವರಿ ಉದ್ಯಾನ' ದ ಸೌಂದರ್ಯವನ್ನು ಕುಲಗೆಡಿಸುತ್ತಿದೆ !

ಬರಹ

ಮುಂಬೈ ನಗರದ ಮಹೇಶ್ವರಿ ಉದ್ಯಾನ, ಮಾಟುಂಗಾ ಪ್ರದೇಶದ ಜನರಿಗೆಲ್ಲಾ ಕಣ್ಮಣಿಯಾಗಿರುವ ಜಾಗ. ಮೊದಲು ಕಿಂಗ್ಸ್ ಸಿರ್ಕಲ್ ಉದ್ಯಾನ, ಬೃಹನ್ ಮುಂಬೈ ಮ್ಯುನಿಸಿಪಲ್ ವಶದಲ್ಲಿದ್ದು, ಬಹಳ ಅಧೋಗತಿಯಲ್ಲಿತ್ತು. ನಂತರ, ಈ ಪಾರ್ಕ್ ನ ಹೆಸರನ್ನು 'ಮಹೇಶ್ವರಿ ಉದ್ಯಾನ' ವೆಂದು ಇಡಲಾಯಿತು. ಇದರ ಮೇಲುಸ್ತವಾರಿಯನ್ನು’ ಲಾರ್ಸನ್ ಅಂಡ್ ಟೂಬ್ರೊ ಕಂಪೆನಿ,’ ಯವರು ನೋಡಿಕೊಳ್ಳುತ್ತಿರುವುದರಿಂದ ಇದರ ಸೌಂದರ್ಯ, ನೂರುಪಾಲು ಹೆಚ್ಚಿತ್ತು. ಈ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿ, ಅತ್ಯುತ್ತಮ ಗಿಡಗಳನ್ನು ತರಿಸಿ ಬೆಳೆಸಿದರು. ಹುಲ್ಲಿನ ಲಾನ್ ನ್ನು ಶುಚಿಗೊಳಿಸಿ, ಅದಕ್ಕೆ ಕ್ರಮವಾಗಿ ರಸಗೊಬ್ಬರದ ಅರೈಕೆ, ಮಾಡಿದರು. ಗಿಡ-ಮರಗಳಿಗೆಲ್ಲಾ, ನೀರಿನ ವ್ಯವಸ್ಥೆ, ಜನರು ಕುಳಿತುಕೊಳ್ಳಲು ಉತ್ತಮ ಕಾಂಕ್ರೀಟ್ ಛೇರ್ ಗಳ ವ್ಯವಸ್ಥೆಗಳನ್ನು, ಸುವ್ಯವಸ್ಥಿತವಾಗಿ ಮಾಡಿದರು. ನೀರಿನ ಕಾರಂಜಿ ಪ್ರತಿದಿನದ ಬೆಳಿಗ್ಯೆ, ಸಾಯಂಕಾಲವೂ ಕೆಲಸಮಾಡುತ್ತಿದೆ. ಮಕ್ಕಳಿಗೆ ಜಾರೋಬಂಡೆ, ಹತ್ತಿ ಇಳಿದು ಮಾಡುವ ಐರನ್ ಬಾರ್ ಗಳ ವ್ಯವಸ್ಥೆ, ಉಯ್ಯಾಲೆಗಳು, ಹಿರಿಯನಾಗರಿಕರಿಗೆ ಕೂಡಲು ಜಾಗದ ವ್ಯವಸ್ಥೆ, ಏಕಾಂತದಲ್ಲಿ ಕುಳಿತು ಪುಸ್ತಕ ಓದಲು, ಅಥವಾ ಧ್ಯಾನಿಸಲು ಲತಾಗೃಹ, ಇತ್ಯಾದಿಗಳನ್ನು ನೋಡಲು ಎಷ್ಟು ಮುದವಾಗುತ್ತಿತ್ತು ?

ಸಿ. ಎಸ್. ಟಿ. ರೈಲ್ವೆ ಸ್ಟೇಶನ್ ನಿಂದ ನೇರವಾಗಿ ಥಾನವರೆಗೆ, ಡ್ರೈವ್ ಮಾಡುವ ಜನರಿಗೆ, ಇದು ಅನುಕೂಲಕರವೇನೋ ನಿಜ. ಆದರೆ, ವಿಪರೀತವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಅಲ್ಲೋ ಇಲ್ಲೋ ಇರುವ ಉದ್ಯಾನಗಳ ನಾಶವನ್ನು, ಯಾರುತಾನೇ ಸಹಿಸಿಯಾರು ?

ಇಲ್ಲಿಯೇ ಭೂಮಿಯ ಅಡಿಯಲ್ಲಿ, ಒಂದು ಭಾರಿ ನೀರಿನ ಟ್ಯಾಂಕ್ ಇದೆ. ಇದು ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಸಹಾಯಕವಾಗಿದೆ. ಈಗ 'ಫ್ಲೈ ಓವರ್ ಸೇತುವೆ', ಬರುತ್ತಿರುವುದರಿಂದ ಪಾರ್ಕ್ ನ ಅರ್ಧದಷ್ಟು ಜಾಗ, ಕಾಂಕ್ರೀಟ್ ಪಿಲ್ಲರ್ ಗಳಿಗೆ ಮೀಸಲಾಗುತ್ತದೆ. ಮುಂದೆ, ಸೇತುವೆಯಮೇಲೆ ಮೋಟಾರ್ ಗಾಡಿಗಳ ಓಡಾಟದಿಂದ ಪಾರ್ಕ್ ನ ಶಾಂತಿಗೆ ಭಂಗಬರುವುದರಲ್ಲಿ ಯಾವ ಸಂದೇಹವಿಲ್ಲ. ಮೊದಲು, ಆಜಾಗದಲ್ಲಿ , ಟ್ರಾಮ್ ಚಲಿಸುತ್ತಿತ್ತು. [ಸನ್ ೧೯೬೪, ರ ವರೆಗೂ ಮುಂಬೈನಲ್ಲಿ ಟ್ರಾಮ್ ಸಂಚಾರವಿತ್ತು
ಈಗ ಚಿತ್ರದಲ್ಲಿ ನಾನು ತೋರಿಸುತ್ತಿರುವ ಪಾರ್ಕ್ ನ ಸುಮಾರು ಪಾಲು ಹೊರಟು ಹೋಗುತ್ತದೆ. ಬಹುಶಃ ಇದೇ ದೃಷ್ಯವನ್ನು, ಮುಂದೆ ನೋಡಲು ಸಾಧ್ಯವಿಲ್ಲ ! ನೀರಿನ ಟ್ಯಾಂಕ್ ಗೂ ಸ್ವಲ್ಪ ಧಕ್ಕೆ ಬರಬಹುದು. ಇಂತಹ ಅನಿವಾರ್ಯ ಪರಿಸ್ಥಿತಿ ಈಗ ಬೇರೆಲ್ಲ ಶಹರುಗಳಲ್ಲು ಇದೆ.

-ಚಿತ್ರ. ವೆಂ.