ಹೊಸೆಯಬೇಕಿದೆ ಹೊಸ ಬದುಕು
ಕವನ
ಹೊಸೆಯಬೇಕಿದೆ ಹೊಸ ಬದುಕು
_ಲಕ್ಷ್ಮೀಕಾಂತ ಇಟ್ನಾಳ
ಓ ಉಸಿರೇ,
ಏರಿಳಿತದ ಈ ಪಯಣದಲಿ
ನಾ ನಡೆವ ದಾರಿಯೂ ನೀನೇ
ದಾರಿಹೋಕನೂ ನೀನೇ
ನೀನಿಲ್ಲದಲ್ಲಿ,
ದಾರಿ ಎಲಿ,್ಲ ದಾರಿಹೋಕ ನೆಲ್ಲಿ
ಕೊಳೆವ ನಾನೆಲ್ಲಿ, ಕಳೆಯ ದೇವರಿನ್ನೆಲ್ಲಿ
ನೆನಪುಗಳೆಲ್ಲ
ನನ್ನಲ್ಲಿ
ಮಣ್ಣಲ್ಲಿ
ಅನಿವಾರ್ಯ ತೊಡುಗೆ
ಈ ಉಸಿರಾಟವೆನಗೆ
ಕಾರಣ ತಿಳಿಸಲೇ ನಿನಗೆ
ಅವಳ ನೆನಪಲಿ ಮೀಂವುದೇ
ಉಸಿರಿಗೂ ಮಿಗಿಲೆನಗೆ
ಅದೊಂದು ಆ ಕ್ಷಣವೇ
ಅವಳ ನೆನಪಾಗುವುದು ನನಗೆ
ಉಸಿರ ಹೀರುವ ಕ್ಷಣವೇ
ಆ ಗಳಿಗೆ ನನಗೆÉ
ಉಸಿರ ಉಸಿರಲಿ ಬೆರೆಸಿ
ನೆನಪುಗಳ ಮಾಲೆಯನು
ಹಸಿರ ಹಸಿರಾಗಿ
ಇರಿಸಿರುವೆ ನಾನು
ನಾಳಿನ ನೆನಪಿಗೆ
ಉಳಿಸಿರುವೆ ನಾನು
ಉಸಿರು ಬಸಿದ ಗಳಿಗೆ
ಕಳೇವರ ನಾನು
ನೆನಪುಗಳೇ ಕವಳ
ಮೆಲ್ಲಲು
ಉಳಿಸಿರುವ ನೆನಪುಗಳ
ಉರಿಸುವೆನು ನಾನು
ಸಾಗಬೇಕಿದೆ ನೆನಪಿನ ವೇಗದಲಿ
ಬಹುದೂರ ಸಾಗಿರುವ
ನನ್ನವಳ ಜೊತೆಗೂಡಿ
ಹೊಸೆಯಬೇಕಿದೆ
ಹೊಸ ಬದುಕೊಂದನು
ಹೊಸ ಹಾಡೊಂದನು
Comments
ಉ: ಹೊಸೆಯಬೇಕಿದೆ ಹೊಸ ಬದುಕು
In reply to ಉ: ಹೊಸೆಯಬೇಕಿದೆ ಹೊಸ ಬದುಕು by H A Patil
ಉ: ಹೊಸೆಯಬೇಕಿದೆ ಹೊಸ ಬದುಕು