ಹೊಸ ಕನ್ನಡ ಕೀಬೋರ್ಡ್ ಬಂತಂತೆ
ಇದೀಗ ಗೊತ್ತಾಯಿತು ಈ [http://www.deccanherald.com/deccanherald/Feb72006/spectrum104717200626.asp|ಸುದ್ದಿ]. ಕನ್ನಡದಲ್ಲಿ ಹೊಸ ಕೀಲಿಮಣೆ ಬಂದಿದೆಯಂತೆ.
ಇದನ್ನು ಹೆಲ್ವೆಟ್ ಪ್ಯಾಕರ್ಡ್ ಕಂಪನಿಯವರು ತಯಾರಿಸಿದ್ದಾರೆ. ಇದರ ವಿಶೇಷವೆಂದರೆ ಇದರಲ್ಲಿ ಪೆನ್ ಬಳಕೆ ಇದೆಯಂತೆ. ವ್ಯಂಜನಗಳಿಗಾಗಿ ಬಟನ್ ಗಳು ಇದ್ದು, ಪೆನ್ ಬಳಸಿ ಅವನ್ನು ಕಾಗುಣಿತ ಮಾಡಬಹುದಂತೆ. ಹೇಗೋ ಗೊತ್ತಿಲ್ಲ. ನಾವು ಎರಡೂ ಕೈಯಿಂದ ಕುಟ್ಟುತ್ತಿದ್ದರೆ ಪೆನ್ ಹೇಗೆ ಸಮಂಜಸವಾಗಿ ಬಳಸಬಹುದು? ಇಲ್ಲವೆ ಬರೀ ಒಂದೇ ಕೈಯಿಂದ ಬಟನ್ ಒತ್ತಿ ಮತ್ತೊಂದು ಕೈಯಿಂದ ಪೆನ್ ಉಪಯೋಗಿಸಬಹುದು. ಏನಾದರು ಆಗಲಿ, ಸರಳವಾಗಿ ಬಳಸುವಂತಿದ್ದರೆ ಸಾಕು.
ಅಬ್ಬಾ! ಇದರ ಬೆಲೆ ಹೆಚ್ಚಾಯಿತೇನೊ ಅನ್ನಿಸುತ್ತೆ. ಒಂದು ಕೀಬೋರ್ದಿಗೆ ಬರೀ 2000 ರೂಪಾಯಿಗಳು! ಅಲ್ಲದೆ ಇದಕ್ಕಾಗಿ ಬೇರೆ ತಂತ್ರಾಂಶ ಬಳಸಬೇಕಾಗಿ ಬರಬಹುದು. ನೋಡೋಣ, ಕಂಪ್ಯೂಟರೆನಲ್ಲಿ ಭಾರತೀಯ ಭಾಷೆಗಳನ್ನು ತರುವ ಈ ಪ್ರಯತ್ನ ಸಫಲವಾಗುವುದೆ ಎಂದು. ಯಾರಾದರು ಈ ಕೀಲಿಮಣೆಯನ್ನು ನೋಡಿದರೆ/ಬಳಸಿದರೆ ನಿಮ್ಮ ಅನಿಸಿಕೆಯನ್ನು ಮರೆಯದೆ ತಿಳಿಸಿ.
Comments
ಉ: ಹೊಸ ಕನ್ನಡ ಲೇಖನಿಮಣೆ
In reply to ಉ: ಹೊಸ ಕನ್ನಡ ಲೇಖನಿಮಣೆ by pavanaja
ಅಫಿಶಿಯಲ್ ಮಾಹಿತಿ
In reply to ಅಫಿಶಿಯಲ್ ಮಾಹಿತಿ by ಪ್ರಶಾಂತ.ಪಂಡಿತ
EFY link ಎಲ್ಲಿ
In reply to EFY link ಎಲ್ಲಿ by ravikh
ಕ್ಷಮಿಸಿ ಇಲ್ಲಿದೆ link
In reply to ಅಫಿಶಿಯಲ್ ಮಾಹಿತಿ by ಪ್ರಶಾಂತ.ಪಂಡಿತ
ಚಿತ್ರ ಇಲ್ಲಿದೆ :)